ಗಂಗಾವತಿ: ಹನುಮದ್ ವ್ರತದ ಅಂಗವಾಗಿ 11 ದಿನ ಹನುಮಮಾಲೆ ಧರಿಸಿ ಭಕ್ತಿ ಶ್ರದ್ಧೆಯಿಂದ ವ್ರತಾಚರಿಸಿದ ವಿಜಯಪುರ ಜಿಲ್ಲೆಯ ನರಸಲಗಿ ಗ್ರಾಮದ ಇಮಾಮ್ಸಾಬ್ ಜಾಫರಸಾಬ್ ಚಪ್ಪರಬಂದಿ ಎಂಬುವವರು ಸೋಮವಾರ ಅಂಜನಾದ್ರಿ ದೇವಸ್ಥಾನಕ್ಕೆ ಆಗಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಾಫರಸಾಬ್, 'ನಾನು ನಿತ್ಯವೂ ಹಿಂದು ಮತ್ತು ನನ್ನ ಧರ್ಮದ ದೇವರ ಪೂಜೆ ಮಾಡುತ್ತೇನೆ. 1994 ರಲ್ಲಿ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದೆ. ಇದೀಗ ಹನುಮನ ಮಾಲೆ ಧರಿಸಿದ್ದೇನೆ. ನಾನು ಹನುಮನ ಪರಮ ಭಕ್ತ' ಎಂದರು.