ಕೊಪ್ಪಳ: ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಭಿನ್ನ ಪ್ರಯತ್ನಗಳ ಮೂಲಕ ವ್ಯಾಕ್ಸಿನ್ ಪಡೆಯಲು ಉತ್ತೇಜನ ನೀಡಲಾಗುತ್ತಿದೆ. ಅದರಂತೆ ನಗರದಲ್ಲಿ ಲಸಿಕೆ ಪಡೆಯಲು ಬಂದವರಿಗೆ ಪುಷ್ಪವೃಷ್ಟಿ ಮಾಡಲಾಯಿತು.
ಇಂದು ನಗರದ ದೇವರಾಜ ಅರಸ್ ಕಾಲೋನಿಯ ಇಲಾಹಿ ಮಸೀದಿ ಸಮಿತಿ, ನೌಜವಾನ್ ಸಮಿತಿ ಹಾಗೂ ಆರೋಗ್ಯ ಇಲಾಖೆಯಿಂದ ಲಸಿಕಾ ಅಭಿಯಾನ ನಡೆಯಿತು. ಈ ವೇಳೆ ವ್ಯಾಕ್ಸಿನ್ ಪಡೆದವರಿಗೆ ಕಮಿಟಿ ಸದಸ್ಯರು ಹೂ ಮಳೆಗೆರೆಯುವ ಮೂಲಕ ಉತ್ತೇಜನ ನೀಡಿದ್ದಾರೆ. ಇದರ ಜೊತೆಗೆ ಒಂದು ನೀರಿನ ಬಾಟಲಿ ಹಾಗೂ ಬಿಸ್ಕೇಟ್ ನೀಡಿದ್ದಾರೆ. ಇನ್ನು ವಯಸ್ಸಾದವರು ಬಂದರೆ ಅವರಿಗೆ ಉರುಗೋಲು ನೀಡಿದ್ದಾರೆ.