ಕರ್ನಾಟಕ

karnataka

ETV Bharat / state

ಮನೆಯಲ್ಲೇ ಹಬ್ಬ ಆಚರಿಸಿ ಕೊರೊನಾ ತಡೆಗೆ ಪ್ರಾರ್ಥಿಸಿದ ಮುಸ್ಲಿಂ ಬಾಂಧವರು - ಈದ್ ಉಲ್ ಫಿತರ್ ಹಬ್ಬ

ಕುಷ್ಟಗಿ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಸರ್ಕಾರದ ಆದೇಶಕ್ಕೆ ಬೆಲೆ ಕೊಟ್ಟು ಮನೆಯಲ್ಲೇ ಹಬ್ಬ ಆಚರಿಸಿ ಕೊರೊನಾ ವೈರಸ್ ನಿಯಂತ್ರಿಸಲು ಕೈ ಮಿಲಾಯಿಸುವ, ಆಲಂಗಿಸುವ ಬದಲಿಗೆ ಮೌಖಿಕವಾಗಿ ಶುಭಾಶಯ ವಿನಿಮಯ ಮಾಡಿಕೊಂಡರು.

Muslim celebrating ramzan at home
ಮನೆಯಲ್ಲೇ ಹಬ್ಬ ಆಚರಿಸಿ ಕೊರೊನಾ ತಡೆಗೆ ಪ್ರಾರ್ಥೀಸಿದ ಮುಸ್ಲೀಂ ಬಾಂಧವರು

By

Published : May 25, 2020, 12:20 PM IST

ಕುಷ್ಟಗಿ(ಕೊಪ್ಪಳ):ಕುಷ್ಟಗಿ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಶಾಂತಿ, ಸೌಹಾರ್ದ ಹಾಗೂ ಸಹಬಾಳ್ವೆಯ ಪ್ರತೀಕವಾಗಿರುವ ಈದ್ ಉಲ್ ಫಿತರ್ ಹಬ್ಬವನ್ನು ಮನೆಯಲ್ಲೇ ಆಚರಿಸುವುದರ ಮೂಲಕ ಮಾದರಿಯಾದರು.

ಮನೆಯಲ್ಲೇ ಹಬ್ಬ ಆಚರಿಸಿ ಕೊರೊನಾ ತಡೆಗೆ ಪ್ರಾರ್ಥಿಸಿದ ಮುಸ್ಲಿಂ ಬಾಂಧವರು

ಸರ್ಕಾರದ ಆದೇಶಕ್ಕೆ ಬೆಲೆ ಕೊಟ್ಟು ಮನೆಯಲ್ಲೇ ಹಬ್ಬ ಆಚರಿಸಿದ ಮುಸ್ಲಿಂ ಬಾಂಧವರು, ಕೊರೊನಾ ವೈರಸ್ ನಿಯಂತ್ರಿಸುವ ಹಿನ್ನೆಲೆ ಕೈ ಮಿಲಾಯಿಸುವ, ಆಲಂಗಿಸುವ ಬದಲಿಗೆ ಮೌಖಿಕವಾಗಿ ಶುಭಾಶಯ ವಿನಿಮಯ ಮಾಡಿಕೊಂಡರು. ರಂಜಾನ್​ ಮಾಸದಲ್ಲಿ ಕಟ್ಟುನಿಟ್ಟಾಗಿ ಉಪವಾಸ ಆಚರಿಸಿದ್ದ‌ ಮುಸ್ಲಿಂ ಬಾಂಧವರು, ಸೋಮವಾರ ತಮ್ಮ ಮನೆಗಳಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಿ ಅಲ್ಲಾಹುನಲ್ಲಿ ಕೊರೊನಾ ಸಂಕಷ್ಟ ನಿವಾರಣೆಗೆ ಪ್ರಾರ್ಥಿಸಿದರು.

ಮನೆಯಲ್ಲೇ ಹಬ್ಬ ಆಚರಿಸಿ ಕೊರೊನಾ ತಡೆಗೆ ಪ್ರಾರ್ಥಿಸಿದ ಮುಸ್ಲಿಂ ಬಾಂಧವರು

ಈ ಬಗ್ಗೆ ಮಾತನಾಡಿದ ಜಾಮೀಯಾ ಮಸೀದಿಯ ಅಧ್ಯಕ್ಷ ಸಯ್ಯದ್ ಮುರ್ತುಜಾ, ಕೊರೊನಾ ವೈರಸ್ ನಿಯಂತ್ರಣದಲ್ಲಿಡಲು ಪ್ರಾರ್ಥನೆ ವೇಳೆ ಸಾಮಾಜಿಕ ಅಂತರ ಕಾಪಾಡಲಾಗಿದೆ. ಕೈ ಕೈ ಮಿಲಾಯಿಸುವುದು, ಆಲಿಂಗನದ ಬದಲಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು ಎಂದರು.

ABOUT THE AUTHOR

...view details