ಕರ್ನಾಟಕ

karnataka

ETV Bharat / state

ಆಸ್ತಿಗಾಗಿ ದಾಯಾದಿ ಕಲಹ : ಕೊಪ್ಪಳದಲ್ಲಿ ಬಿತ್ತು ಹೆಣ - ಕೊಪ್ಪಳ ಪೊಲೀಸ್​ ಠಾಣೆ

ಆಸ್ತಿ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ..

Murder at Koppal for property
ಆಸ್ತಿಗಾಗಿ ಕೊಪ್ಪಳದಲ್ಲಿ ಕೊಲೆ

By

Published : May 12, 2021, 6:03 PM IST

ಕುಷ್ಟಗಿ(ಕೊಪ್ಪಳ): ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಆಸ್ತಿ ಹಂಚಿಕೆ ವಿಚಾರದಲ್ಲಿ ನಡೆದ ದಾಯಾದಿ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ.

ಆಸ್ತಿಗಾಗಿ ಕೊಪ್ಪಳದಲ್ಲಿ ಕೊಲೆ..

ಯಮನಪ್ಪ ತಿಪ್ಪಣ್ಣ ಹುಗ್ಗಿ(33) ಎಂಬಾತ ಕೊಲೆಯಾದ ವ್ಯಕ್ತಿ. ಹುಗ್ಗಿ ಸಹೋದರರ ಮಧ್ಯೆ 10 ಎಕರೆ ಜಮೀನು ಸಂಬಂಧ ಸಹೋದರ ಕುಟುಂಬಗಳ ಮದ್ಯೆ ವ್ಯಾಜ್ಯ ಇತ್ತು.

ಈ ಹಿನ್ನೆಲೆ ಯಮನಪ್ಪ ತಿಪ್ಪಣ್ಣ ಹುಗ್ಗಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾರೆ. ದ್ಯಾವಪ್ಪ ತಿಪ್ಪಣ್ಣ ಹುಗ್ಗಿಯನ್ನು ಎತ್ತಿನ ಬಂಡಿಗೆ ಕಟ್ಟಿ ಹಾಕಿ ಕೆಲವರು ಹಲ್ಲೆ ನಡೆಸಿದ್ದಾರೆ. ತೀವ್ರಗಾಯಗೊಂಡ ದ್ಯಾವಪ್ಪನನ್ನು ಬಾಗಲಕೋಟೆ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.

ಓದಿ:ಶವಸಂಸ್ಕಾರದ 'ಟೈಮ್'​ ನಾವೇ ಫಿಕ್ಸ್​ ಮಾಡುತ್ತೇವೆ : ಸಚಿವ ಆರ್ ಅಶೋಕ್​

ಪ್ರಕರಣ ಸಂಬಂಧ ಹನಮಪ್ಪ ತಿಪ್ಪಣ್ಣ ಹುಗ್ಗಿ, ಹೊಳಿಯಪ್ಪ ತಿಪ್ಪಣ್ಣ ಹುಗ್ಗಿ, ಮಾಳವ್ವ ಹೊಳಿಯಪ್ಪ ಹುಗ್ಗಿ, ಕನಕಪ್ಪ ತಿಪ್ಪಣ್ಣ ಹುಗ್ಗಿ, ದೇವಾನಂದ ಹೊಳಿಯಪ್ಪ ಹುಗ್ಗಿ ವಿರುದ್ಧ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details