ಕರ್ನಾಟಕ

karnataka

ETV Bharat / state

ಜಾಮೀನಿನ ಮೇಲೆ ಗ್ರಾಮಕ್ಕೆ ಬಂದಿದ್ದ ಕೊಲೆ ಆರೋಪಿ ಹತ್ಯೆ! - ತಮಕೂರಿನಲ್ಲಿ ಕೊಲೆ ಆರೋಪಿಯ ಹತ್ಯ,

ಜಾಮೀನಿನ ಮೇಲೆ ಗ್ರಾಮಕ್ಕೆ ಬಂದಿದ್ದ ಕೊಲೆ ಆರೋಪಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್​ ತಾಲೂಕಿನಲ್ಲಿ ನಡೆದಿದೆ.

murder accused killed,  murder accused killed in Tumkur, Tumkur crime news, ಕೊಲೆ ಆರೋಪಿಯ ಹತ್ಯೆ, ತಮಕೂರಿನಲ್ಲಿ ಕೊಲೆ ಆರೋಪಿಯ ಹತ್ಯ, ತುಮಕೂರು ಅಪರಾಧ ಸುದ್ದಿ
ಜಾಮೀನಿನ ಮೇರೆ ಗ್ರಾಮಕ್ಕೆ ಬಂದಿದ್ದ ಕೊಲೆ ಆರೋಪಿಯ ಹತ್ಯೆ

By

Published : Nov 4, 2021, 2:31 AM IST

ತುಮಕೂರು: ರೌಡಿ ಶೀಟರ್​ನೊಬ್ಬನನ್ನು ಹತ್ಯೆ ಮಾಡಿ ಜೈಲು ಸೇರಿ ಜಾಮೀನ ಮೇಲೆ ಬಿಡುಗಡೆಯಾಗಿ ಹೊರಬಂದಿದ್ದ ಆರೋಪಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕೀಲಾರ ಗ್ರಾಮದಲ್ಲಿ ನಡೆದಿದೆ.

ನಿಂಗೇಗೌಡ ಕೊಲೆಯಾದ ವ್ಯಕ್ತಿ. ನಿನ್ನೆ ರಾತ್ರಿ ಕಿಲಾರ ಗ್ರಾಮದಲ್ಲಿ ನಿಂಗೇಗೌಡ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ದುಷ್ಕರ್ಮಿಗಳು ಆತನ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಇತ್ತೀಚೆಗೆ ಗ್ರಾ.ಪಂ ಚುನಾವಣೆ ವೇಳೆ ರಾಜಕೀಯ ದ್ವೇಷದ ಹಿನ್ನಲೆ ಕೀಲಾರ ಗ್ರಾಮದ ರೌಡಿಶೀಟರ್ ವಿನಯ್ ಎಂಬುವವನ್ನು ನಿಂಗೇಗೌಡ, ಶಶಿಕಲಾ, ಪ್ರಕಾಶ್ ಸೇರಿದಂತೆ ಐವರು ಹತ್ಯೆ ಮಾಡಿದ್ದರು. ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಿಂಗೇಗೌಡ ಸೇರಿದಂತೆ ಐದು ಮಂದಿ ಜೈಲಿ ಗೆ ಹೋಗಿದ್ದರು. ಅಲ್ಲದೆ ಪ್ರಕರಣ ವಿಚಾರಣೆ ಹಂತದಲ್ಲಿತ್ತು.

3 ದಿನಗಳ ಹಿಂದಷ್ಟೇ ಆರೋಪಿ ನಿಂಗೇಗೌಡ ಜಾಮೀನನ ಮೇಲೆ ಬಿಡುಗಡೆಯಾಗಿ ಗ್ರಾಮಕ್ಕೆ ಬಂದಿದ್ದನು. ವಿಷಯ ತಿಳಿದು ಸ್ಥಳಕ್ಕೆ ಬಂದ ಎಸ್ಪಿ ಉದೇಶ್, ಡಿವೈಎಸ್‌ಪಿ ಜಿ.ಆರ್.ರಮೇಶ್, ಸಿಪಿಐ ಗುರುಪ್ರಸಾದ್, ಪಿಎಸ್‌ಐ ಚೇತನ್ ಬೇಟಿ ನೀಡಿ ಪರಿಶೀಲಿಸಿದರು. ಹುಲಿಯೂರು ದುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ABOUT THE AUTHOR

...view details