ಕರ್ನಾಟಕ

karnataka

ETV Bharat / state

ಗಂಗಾವತಿ ನಗರಸಭಾ ಸದಸ್ಯನ ಕಿಡ್ನಾಪ್ ಪ್ರಕರಣ: ಆರೋಪಿಗಳ‌ ಬಂಧನಕ್ಕೆ ಕುಟುಂಬಸ್ಥರ ಒತ್ತಾಯ - ನಗರಸಭಾ ಸದಸ್ಯನ ಅಪಹರಣ ಸುದ್ದಿ

ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯ ಮನೋಹರಸ್ವಾಮಿ ಅವರ ಕಿಡ್ನಾಪ್ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಅವರ ಕುಟುಂಬ ಸದಸ್ಯರು ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.

accuses
ಆರೋಪಿಗಳ‌ ಬಂಧನಕ್ಕೆ ಕುಟುಂಬಸ್ಥರ ಒತ್ತಾಯ

By

Published : Nov 4, 2020, 2:00 PM IST

Updated : Nov 4, 2020, 2:43 PM IST

ಗಂಗಾವತಿ:ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯ ಮನೋಹರಸ್ವಾಮಿ ಅವರ ಕಿಡ್ನಾಪ್ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕುಟುಂಬ ಸದಸ್ಯರು ಪೊಲೀಸರಿಗೆ ಮನವಿ ಸಲ್ಲಿಸಿದರು.

ಉದ್ಯಮಿ ಶಶಿಧರ ಸ್ವಾಮಿ ನೇತೃತ್ವದಲ್ಲಿ ನಗರ ಠಾಣೆಗೆ ಆಗಮಿಸಿದ ಸುಮಾರು 50ಕ್ಕೂ ಹೆಚ್ಚು ಕುಟುಂಬ ಸದಸ್ಯರು, ಪ್ರಕರಣದಲ್ಲಿನ ಇತರೆ ಆರೋಪಿಗಳನ್ನು ಬಂಧಿಸಿ ತಮಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಆರೋಪಿಗಳ‌ ಬಂಧನಕ್ಕೆ ಕುಟುಂಬಸ್ಥರ ಒತ್ತಾಯ

ಈ ಬಗ್ಗೆ ಮಾತನಾಡಿದ ಸದಸ್ಯ ಮನೋಹರಸ್ವಾಮಿ ಅವರ ಪತ್ನಿ ಪೂಜಾ, ಅಪಹರಣದ ಸಂದರ್ಭದಲ್ಲಿ ತನ್ನ ಪತಿಗೆ ಏನಾದರೂ ಆಗಿದ್ದರೆ ಅದಕ್ಕೆ ಯಾರು ಹೊಣೆ ಹೊರುತ್ತಿದ್ದರು..? ನಮ್ಮ ಕುಟುಂಬವನ್ನು ಈ ಪ್ರಕರಣದ ಆರೋಪಿಗಳು ಸಲಹುತ್ತಿದ್ದರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ನಗರಠಾಣೆಯ ಪಿಐ ವೆಂಕಟಸ್ವಾಮಿಗೆ ಮನವಿ ಸಲ್ಲಿಸಿ ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಅವರನ್ನು ಬಂಧಿಸುವವರೆಗೂ ಕುಟುಂಬ ಸಮೇತ ಠಾಣೆಯ ಆವರಣದಲ್ಲಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.

Last Updated : Nov 4, 2020, 2:43 PM IST

For All Latest Updates

ABOUT THE AUTHOR

...view details