ಕರ್ನಾಟಕ

karnataka

ETV Bharat / state

ಗಂಗಾವತಿ ನಗರಸಭೆ ಸದಸ್ಯನ ಅಪಹರಣ ಪ್ರಕರಣ.. ಕಾರ್ಯಾಚರಣೆಯ ರಹಸ್ಯ ಬಿಚ್ಚಟ್ಟ ಆರೋಪಿಗಳು - : ನಗರಸಭೆಯ ಕಾಂಗ್ರೆಸ್​ ಸದಸ್ಯ ಮನೋಹರ ಸ್ವಾಮಿ ಅಪಹರಣ ಪ್ರಕರಣ

ಬಿಜೆಪಿ ಮುಖಂಡರು ಹಾಗೂ ನಗರಸಭಾ ಸದಸ್ಯರಾದ ರಾಚಪ್ಪ ಸಿದ್ದಾಪುರ, ರಮೇಶ ಚೌಡ್ಕಿ, ಸಂತೋಷ್ ಕೇಲೋಜಿ, ಪರಶುರಾಮ ಮಡ್ಡೇರ ಮೊದಲಾದವರು ಅಪಹರಣಕ್ಕೆ ಸಾಥ್ ನೀಡಿದ್ದಾರೆ ಎಂದು ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ..

kidnapers given statement
ಗಂಗಾವತಿ ನಗರಸಭೆ ಸದಸ್ಯನ ಅಪಹರಣ ಪ್ರಕರಣ..ಕಾರ್ಯಚರಣೆಯ ರಹಸ್ಯ ಬಿಚ್ಚಿಟ್ಟ ಆರೋಪಿಗಳು

By

Published : Nov 1, 2020, 11:37 AM IST

ಗಂಗಾವತಿ: ನಗರಸಭೆಯ ಕಾಂಗ್ರೆಸ್​ ಸದಸ್ಯ ಮನೋಹರ ಸ್ವಾಮಿ ಅಪಹರಣ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿರುವ ಆರೋಪಿಗಳು ಇದೀಗ ತಮ್ಮ ಕಾರ್ಯಾಚರಣೆಯ ರಹಸ್ಯ ಹೊರಗೆಡವಿದ್ದಾರೆ.

ಗಂಗಾವತಿ ನಗರಸಭೆ ಸದಸ್ಯನ ಅಪಹರಣ ಪ್ರಕರಣ.. ಕಾರ್ಯಾಚರಣೆಯ ರಹಸ್ಯ ಬಿಚ್ಚಿಟ್ಟ ಆರೋಪಿಗಳು

ಕಾರ್ಯಾಚರಣೆಯ ಉದ್ದೇಶ ಏನು?, ಜಾಲ ಹೇಗೆ ಹೆಣೆಯಲಾಗಿತ್ತು, ಇದಕ್ಕೆ ಯಾರೆಲ್ಲಾ ಸಾಥ್ ನೀಡಿದ್ದರು. ಸೂತ್ರಧಾರಿಗಳು ಯಾರು ಎಂಬ ಮಾಹಿತಿಯನ್ನು ಆರೋಪಿಗಳು ಪೊಲೀಸರ ಮುಂದೆ ಬಿಚ್ಚಿಡುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್​ ಆಗಿದೆ.

ಬಂಧಿತ ಆರೋಪಿಗಳಾದ ಶರಣ, ರವಿ ಹಾಗೂ ಬಸವ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನ.2ರಂದು ಗಂಗಾವತಿ ‌ನಗರಸಭೆಗೆ ನಡೆಯುತ್ತಿದ್ದ ಚುನಾವಣೆ ಹಿನ್ನೆಲೆ ಅಪಹರಣ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.

ಅಲ್ಲದೇ ಬಿಜೆಪಿ ಮುಖಂಡರು ಹಾಗೂ ನಗರಸಭಾ ಸದಸ್ಯರಾದ ರಾಚಪ್ಪ ಸಿದ್ದಾಪುರ, ರಮೇಶ ಚೌಡ್ಕಿ, ಸಂತೋಷ್ ಕೇಲೋಜಿ, ಪರಶುರಾಮ ಮಡ್ಡೇರ ಮೊದಲಾದವರು ಅಪಹರಣಕ್ಕೆ ಸಾಥ್ ನೀಡಿದ್ದಾರೆ ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ.

ABOUT THE AUTHOR

...view details