ಕೊಪ್ಪಳ: ಜನರು ಜಾಗ ಸಿಕ್ರೆ ಸಾಕು ಹಿಂದೆ ಮುಂದೆ ನೋಡದೆ ಎಲ್ಲೆಂದರಲ್ಲಿ ಕಸ ಬಿಸಾಡ್ತಾರೆ. ಅಂತಹವರಿಗೆ ಅರಿವು ಮೂಡಿಸಲು ಕೊಪ್ಪಳ ನಗರಸಭೆ ಸಿಬ್ಬಂದಿ ಮುಂದಾಗಿದ್ದಾರೆ.
ರಂಗೋಲಿ ಹಾಕಿ ಸ್ವಚ್ಛತೆಯ ಅರಿವು ಮೂಡಿಸಿದ ಕೊಪ್ಪಳ ನಗರಸಭೆ ಸಿಬ್ಬಂದಿ - ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದ ನಗರಸಭೆ ಸಿಬ್ಬಂದಿ
ಎಲ್ಲೆಂದರಲ್ಲಿ ಕಸ ಹಾಕಬಾರದು ಎಂಬ ಸಂದೇಶ ನೀಡುವ ನಿಟ್ಟಿನಲ್ಲಿ ನಗರಸಭೆ ಸಿಬ್ಬಂದಿ ಕಸವನ್ನು ಸ್ವಚ್ಛಗೊಳಿಸಿ ಆ ಜಾಗದಲ್ಲಿ ರಂಗೋಲಿ ಹಾಕಿ ಅರಿವು ಮೂಡಿಸಿದ್ದಾರೆ.
![ರಂಗೋಲಿ ಹಾಕಿ ಸ್ವಚ್ಛತೆಯ ಅರಿವು ಮೂಡಿಸಿದ ಕೊಪ್ಪಳ ನಗರಸಭೆ ಸಿಬ್ಬಂದಿ Municipal staff are aware of clean](https://etvbharatimages.akamaized.net/etvbharat/prod-images/768-512-5404119-thumbnail-3x2-net.jpg)
ಸ್ವಚ್ಛ ಭಾರತ ಕಲ್ಪನೆಯಲ್ಲಿ ನಗರವನ್ನು ಸ್ವಚ್ಛವಾಗಿರಿಸಲು ನಗರಸಭೆ ಪೌರಕಾರ್ಮಿಕರು, ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆದರೂ ಸಹ ಜನರು ಎಲ್ಲೆಂದರಲ್ಲಿ ಕಸ ಹಾಕುತ್ತಲೇ ಇದ್ದಾರೆ. ನಗರದ ಸಿಂಪಿ ಲಿಂಗಣ್ಣ ರಸ್ತೆಯಲ್ಲಿರುವ ಟ್ರಿನಿಟಿ ಶಾಲೆಯ ಮುಂದೆ ಜನರು ಕನಸವನ್ಮು ಹಾಕಿದ್ದರು. ಅದರಿಂದ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಕಿರಿಕಿರಿಯಾಗುತ್ತಿತ್ತು. ಮನೆಯ ಮುಂದೆ ನಿತ್ಯವೂ ಕಸ ಸಂಗ್ರಹಣೆಯ ಗಾಡಿಗಳು ಬರುತ್ತವೆ. ಆದರೂ ಸಹ ಜನರು ಅಲ್ಲಿ ಬಂದು ಕಸ ಸುರಿಯುತ್ತಿದ್ದರು. ಎಲ್ಲೆಂದರಲ್ಲಿ ಕಸ ಹಾಕಬಾರದು ಎಂಬ ಸಂದೇಶ ನೀಡುವ ನಿಟ್ಟಿನಲ್ಲಿ ನಗರಸಭೆ ಸಿಬ್ಬಂದಿ ಕಸವನ್ನು ಸ್ವಚ್ಛಗೊಳಿಸಿ ಆ ಜಾಗದಲ್ಲಿ ರಂಗೋಲಿ ಹಾಕಿದರು.
ಇದಕ್ಕೆ ಸ್ಥಳೀಯ ಕೆಲ ಮಹಿಳೆಯರು ಹಾಗೂ ಶಾಲಾ ಬಾಲಕಿಯರು ಸಾಥ್ ನೀಡಿದ್ರು.