ಗಂಗಾವತಿ:ಬೇಸಿಗೆ ಬಂತು ಎಂದರೆ ಕುಡಿಯುವ ನೀರಿಗೆ ಜಿಲ್ಲೆಯ ನೂರಾರು ಗ್ರಾಮಗಳಲ್ಲಿ ಸಮಸ್ಯೆ ಎದುರಾಗುತ್ತದೆ. ಆದರೆ ಗಂಗಾವತಿಯಲ್ಲಿ ಮಾತ್ರ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಲಕ್ಷಾಂತರ ಲೀಟರ್ ಶುದ್ಧ ಕುಡಿಯುವ ನೀರು ಪೋಲಾದ ಘಟನೆ ಬೆಳಕಿಗೆ ಬಂದಿದೆ.
ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ: ವಾಟರ್ಟ್ಯಾಂಕ್ನಿಂದ ಲಕ್ಷಾಂತರ ಲೀಟರ್ ನೀರು ಪೋಲು - Gangavathi
ಗಂಗಾವತಿಯ ರಾಣಾಪ್ರತಾಪ್ ಸಿಂಗ್ ವೃತ್ತಕ್ಕೆ ಸಮೀಪದ ಆಟೋನಗರದಲ್ಲಿ ಇರುವ 5 ಲಕ್ಷ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಮೇಲ್ತೊಟ್ಟಿ (ಓವರ್ ಹೆಡ್ ಟ್ಯಾಂಕ್)ಯಿಂದ ಶುದ್ಧ ನೀರು ಪೋಲಾಗಿರುವುದು ಬೆಳಕಿಗೆ ಬಂದಿದೆ.
![ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ: ವಾಟರ್ಟ್ಯಾಂಕ್ನಿಂದ ಲಕ್ಷಾಂತರ ಲೀಟರ್ ನೀರು ಪೋಲು Lakhs of liters of water Waste](https://etvbharatimages.akamaized.net/etvbharat/prod-images/768-512-8029764-598-8029764-1594778320094.jpg)
ನಗರದ ರಾಣಾಪ್ರತಾಪ್ ಸಿಂಗ್ ವೃತ್ತಕ್ಕೆ ಸಮೀಪದ ಆಟೋನಗರದಲ್ಲಿ ಇರುವ 5 ಲಕ್ಷ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಮೇಲ್ತೊಟ್ಟಿ (ಓವರ್ ಹೆಡ್ ಟ್ಯಾಂಕ್)ಯಿಂದ ಸುಮಾರು ನಾಲ್ಕು ಗಂಟೆಗೂ ಹೆಚ್ಚುಕಾಲ ನೀರು ಪೋಲಾಗಿರುವುದು ಬೆಳಕಿಗೆ ಬಂದಿದೆ. ನಗರದ ಜನರಿಗೆ ದಿನದ 24 ಗಂಟೆಯೂ ಕುಡಿಯುವ ನೀರು ತಲುಪಿಸುವ ಉದ್ದೇಶಕ್ಕೆ ಜಾರಿಗೆ ಬಂದಿರುವ 24*7 ಯೋಜನೆಯಲ್ಲಿನ ಈ ಟ್ಯಾಂಕಿನಿಂದ ಕಳೆದ ಹಲವು ದಿನಗಳಿಂದ ಎರಡು ದಿನಕ್ಕೊಮ್ಮೆಯಂತೆ ಲಕ್ಷಾಂತರ ಲೀಟರ್ ನೀರು ಪೋಲಾಗುತ್ತಿದೆ.
ಸಮೀಪದಲ್ಲಿ ಜನವಸತಿ ಪ್ರದೇಶವಿಲ್ಲ. ಈ ಟ್ಯಾಂಕ್ ಮೂಲಕ ಇದುವರೆಗೆ ಯಾವುದೇ ವಸತಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಿಲ್ಲ. ಆದರೆ, ಎರಡು ದಿನಕ್ಕೊಮ್ಮೆ ನಿತ್ಯ ನೀರು ಪೋಲಾಗುತ್ತಿದೆ. ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಪ್ರತ್ಯಕ್ಷದರ್ಶಿ ಕೆ. ಖಾಸಿಂ ಬೇಸರ ವ್ಯಕ್ತಪಡಿಸಿದ್ದಾರೆ.