ಕರ್ನಾಟಕ

karnataka

ಕುಡಿಯುವ ನೀರು ಬಿಡುವಲ್ಲಿ ನಗರಸಭೆ ನಿರ್ಲಕ್ಷ್ಯ: ಕ್ರಮಕ್ಕೆ ಕರವೇ ಆಗ್ರಹ

ಗಂಗಾವತಿ ತಾಲೂಕಿನಲ್ಲಿ ನಗರಸಭೆ ಸರಿಯಾಗಿ ಕುಡಿಯುವ ನೀರನ್ನು ಸರವರಾಜು ಮಾಡುತ್ತಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಕರವೇ ಸಂಘಟನೆಯ ಪಂಪಣ್ಣ ಒತ್ತಾಯಿಸಿದ್ದಾರೆ.

By

Published : Aug 22, 2020, 2:04 PM IST

Published : Aug 22, 2020, 2:04 PM IST

ಕರವೇ ಸಂಘಟನೆಯ ಅಧ್ಯಕ್ಷ ಪಂಪಣ್ಣ ನಾಯಕ್
ಕರವೇ ಸಂಘಟನೆಯ ಅಧ್ಯಕ್ಷ ಪಂಪಣ್ಣ ನಾಯಕ್

ಗಂಗಾವತಿ:ಮಳೆಗಾಲದಂತಹ ಈ ಸಂದರ್ಭದಲ್ಲಿ ಕುಡಿಯುವ ನೀರು ಬಿಡುವಲ್ಲಿ ನಗರಸಭೆ ನಿರ್ಲಕ್ಷ್ಯ ಮಾಡುತ್ತಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಕರವೇ ಸಂಘಟನೆಯ ಪಂಪಣ್ಣ ನಾಯಕ್ ಒತ್ತಾಯಿಸಿದ್ದಾರೆ.

ನಗರದಿಂದ ಕೂಗಳತೆಯ ದೂರದಲ್ಲಿ ತುಂಗಭದ್ರಾ ನದಿಯಲ್ಲಿ ಪ್ರವಾಹ ಉಂಟಾಗುತ್ತಿದೆ. ನೀರಿಗೆ ಕೊರತೆ ಇಲ್ಲ. ಆದರೆ ಅದೇ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ನಗರಸಭೆ, ನಗರದ ಜನರಿಗೆ ನಾಲ್ಕೈದು ದಿನಕ್ಕೊಮ್ಮೆ ನೀರು ಬಿಡುತ್ತಿದೆ. ಹೀಗಾಗಿ ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದು, ಕೂಡಲೇ ಸರಿಪಡಿಸಬೇಕು ಎಂದು ಮನವಿ ಮಾಡಿದರು.

ಮಳೆಗಾಲದಲ್ಲಿ ಇಂತಹ ಅಸಮಪರ್ಕ ನಿರ್ವಹಣೆ ಮಾಡಿದರೆ ಮುಂದಿನ ಬೇಸಿಗೆ ದಿನಗಳಲ್ಲಿ ನಗರಸಭೆ ಹೇಗೆ ಕಾರ್ಯನಿರ್ವಹಿಸಲಿದೆ ಎಂದು ಜನ ಆತಂಕ್ಕೀಡಾಗಿದ್ದಾರೆ.

ABOUT THE AUTHOR

...view details