ಗಂಗಾವತಿ:ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಗರದ ನಾನಾ ಭಾಗದಲ್ಲಿ ಅಳವಡಿಸಿದ್ದ ಯೂಸರ್ ಈಸಿ ಟಾಯ್ಲೆಟ್ (ಸುಲಭ ಬಳಕೆಯ ಶೌಚಾಲಯಗಳು) ಇದೀಗ ಸಂಪೂರ್ಣ ಹಾಳಾಗಿವೆ. ಪರಿಣಾಮ ನಗರದಲ್ಲಿ ಮೂತ್ರಾಲಯ ಮತ್ತು ಶೌಚಾಲಯದ ಸಮಸ್ಯೆ ಉದ್ಭವವಾಗಿದೆ.
ನಗರಸಭೆಯ ನಿರ್ಲಕ್ಷ್ಯದಿಂದ ಹಾಳಾದ 'ಯೂಸರ್ ಈಸಿ ಟಾಯ್ಲೆಟ್': ಸಾರ್ವಜನಿಕರ ಆರೋಪ
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯೂಸರ್ ಈಸಿ ಟಾಯ್ಲೆಟ್ಗಳು (ಸುಲಭ ಬಳಕೆಯ ಶೌಚಾಲಯಗಳು) ಇದೀಗ ಸಂಪೂರ್ಣ ಹಾಳಾಗಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ನಗರಸಭೆಯ ನಿರ್ಲಕ್ಷ್ಯಕ್ಕೆ ಹಾಳಾದವು 'ಯೂಸರ್ ಈಸಿ ಟಾಯ್ಲೆಟ್'
2011ರಲ್ಲಿ ನಗರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇಳೆ ಸುಲಭವಾಗಿ ಸಾಗಿಸಬಹುದಾದ ಶೌಚಾಲಯಗಳನ್ನು ನಗರದ ನಾನಾ ಕಡೆಗಳಲ್ಲಿ ಇರಿಸಲಾಗಿತ್ತು.
ಪೆಟ್ಟಿಗೆಯಾಕಾರದ ಈ ಶೌಚಾಲಯಗಳಲ್ಲಿ ಒಂದು ಕಡೆ ಮೂತ್ರಾಲಯ, ಮತ್ತೊಂದು ಕಡೆ ಶೌಚದ ಕಮೋಡ್ ಇತ್ತು. ಬಳಕೆದಾರ ಸ್ನೇಹಿಯಾಗಿದ್ದ ಈ ಶೌಚಾಲಯಗಳು ಇದೀಗ ಸಂಪೂರ್ಣ ಹಾಳಾಗಿವೆ. ಕನಿಷ್ಠ ಇಂತವುಗಳನ್ನ ನಗರದ ಪ್ರಮುಖ ಸ್ಥಳದಲ್ಲಿ ಇರಿಸಿದರೆ, ಬಯಲು ಶೌಚ ಸಮಸ್ಯೆ ಕಡಿಮೆಯಾಗಬಹುದು ಎನ್ನುವುದು ಜನರ ಅಭಿಪ್ರಾಯ.