ಕೊಪ್ಪಳ: ಚುನಾವಣೆ ನಡೆದು 6 ತಿಂಗಳ ಬಳಿಕ ಅಧ್ಯಕ್ಷ-ಉಪಾಧ್ಯಕ್ಷರ ಹೆಸರು ಅಧಿಕೃತವಾಗಿ ಘೋಷಣೆಯಾದ ಬಳಿಕ ಅಧ್ಯಕ್ಷರಾಗಿ ಲತಾ ಗವಿಸಿದ್ದಪ್ಪ ಚಿನ್ನೂರು ಹಾಗೂ ಉಪಾಧ್ಯಕ್ಷರಾಗಿ ಜರೀನಾಬೇಗಂ ಅರಗಂಜಿ ಪದಗ್ರಹಣ ಮಾಡಿದರು.
ಚುನಾವಣೆ ನಡೆದ 6 ತಿಂಗಳ ಬಳಿಕ ನಗರಸಭೆ ಅಧ್ಯಕ್ಷ ಸ್ಥಾನ ಅಲಂಕರಿಸಿದ ಲತಾ ಗವಿಸಿದ್ದಪ್ಪ - ಕೊಪ್ಪಳ ನಗರಸಭೆ ಅಧ್ಯಕ್ಷೆ ಅಧಿಕೃತ ಘೋಷಣೆ,
ಕೊಪ್ಪಳದಲ್ಲಿ ಚುನಾವಣೆ ನಡೆದು 6 ತಿಂಗಳ ಬಳಿಕ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಭರ್ತಿಯಾದವು.
ಚುನಾವಣೆ ನಡೆದ 6 ತಿಂಗಳ ಬಳಿಕ ನಗರಸಭೆ ಅಧ್ಯಕ್ಷ ಸ್ಥಾನ ಅಲಂಕರಿಸಿದ ಲತಾ ಗವಿಸಿದ್ದಪ್ಪ
ಎಸಿ ನಾರಾಯಣ ರೆಡ್ಡಿ ಸೇರಿದಂತೆ ಸದಸ್ಯರ ಸಮ್ಮುಖದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಯಿತು. ಬಳಿಕ ಲತಾ ಗವಿಸಿದ್ದಪ್ಪ ಚಿನ್ನೂರು ಹಾಗೂ ಜರೀನಾ ಬೇಗಂ ಅರಗಂಜಿ ಅಧ್ಯಕ್ಷ-ಉಪಾಧ್ಯಕ್ಷರಾಗಿ ಪದಗ್ರಹಣ ಮಾಡಿದರು.
ಬಳಿಕ ಮಾತನಾಡಿದ ಅಧ್ಯಕ್ಷೆ ಲತಾ ಚಿನ್ನೂರು, ನಗರಸಭೆ ಅಧಿಕಾರಿಗಳು, ಶಾಸಕರು ಹಾಗೂ ಸದಸ್ಯರ ಸಹಕಾರದೊಂದಿಗೆ ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಈಗ ಕೊರೊನಾ ಸೋಂಕು ಹರಡುತ್ತಿರುವುದರಿಂದ ಇದನ್ನು ತಡೆಗಟ್ಟುವುದಕ್ಕೆ ನಗರಸಭೆಯು ಮೊದಲ ಅದ್ಯತೆ ನೀಡಲಿದೆ ಎಂದರು.