ಗಂಗಾವತಿ:ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಪರಣ್ಣ ಮುನವಳ್ಳಿ, ಚಿಕಿತ್ಸೆಗೆ ಬರುವ ಹೊರ ಮತ್ತು ಒಳ ರೋಗಿಗಳಿಗೆ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿದರು.
ಆಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದ ಶಾಸಕ ಮುನವಳ್ಳಿ
ಸರ್ಕಾರಿ ಉಪ ವಿಭಾಗದ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಪರಣ್ಣ ಮುನವಳ್ಳಿ, ಚಿಕಿತ್ಸೆಗೆ ಬರುವ ಹೊರ ಮತ್ತು ಒಳ ರೋಗಿಗಳಿಗೆ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿ, ಜಿಲ್ಲಾ ಆರೋಗ್ಯಾಧಿಕಾರಿ ಲಿಂಗರಾಜ್ ಅವರಿಗೆ ಕೆಲವು ಸಲಹೆ ಸೂಚನೆ ನೀಡಿದರು.
ಆಸ್ಪತ್ರೆಗೆ ಭೇಟಿ ನೀಡಿ ಅಸೌಕರ್ಯ ಪರಿಶೀಲಿಸಿದ ಶಾಸಕ ಮುನವಳ್ಳಿ
ಜಿಲ್ಲಾ ಆರೋಗ್ಯಾಧಿಕಾರಿ ಲಿಂಗರಾಜ್ ಅವರೊಂದಿಗೆ ಮಾತನಾಡಿ ಕೂಡಲೇ ಹೊರರೋಗಿಗಳ ಸೌಕರ್ಯಕ್ಕೆ ಪ್ರತ್ಯೇಕ ಕೌಂಟರ್ ಆರಂಭಿಸುವಂತೆ ಸಲಹೆ ನೀಡಿದರು. ಜೊತೆಗೆ ಒಳರೋಗಿಗಳಿಗೆ ಉಂಟಾಗುತ್ತಿರುವ ಸಮಸ್ಯೆ ಪರಿಶೀಲಿಸುವಂತೆ ಸೂಚಿಸಿದರು.
ಬಳಿಕ ಮಾತನಾಡಿದ ಶಾಸಕ ಮುನವಳ್ಳಿ, ಆಸ್ಪತ್ರೆಯಲ್ಲಿನ ಗುಣಮಟ್ಟದ ಚಿಕಿತ್ಸೆಯಿಂದಾಗಿ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. 30 ಬೆಡ್ ಆಸ್ಪತ್ರೆಯನ್ನು 60 ಬೆಡ್ಗೆ ಏರಿಸಲು ಈಗಾಗಲೇ ಸರ್ಕಾರದಿಂದ 2.50 ಕೋಟಿ ಅನುದಾನ ಮಂಜೂರಾಗಿದೆ. ಹೆಚ್ಚುವರಿ ಕೊಠಡಿ ಶೀಘ್ರ ಆರಂಭವಾಗಲಿವೆ ಎಂದರು.