ಗಂಗಾವತಿ :ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆಯುವ ವಾಲ್ಮೀಕಿ ಸಮಾಜದ ಜಾತ್ರಾ ಮಹೋತ್ಸವಕ್ಕೆ ಸ್ಥಳೀಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ನೂರು ಕ್ವಿಂಟಾಲ್ ಅಕ್ಕಿ ದೇಣಿಗೆಯಾಗಿ ನೀಡಿದ್ದಾರೆ.
ರಾಜನಹಳ್ಳಿಯ ಜಾತ್ರೆಗೆ ನೂರು ಕ್ವಿಂಟಲ್ ಅಕ್ಕಿ ದೇಣಿಗೆ ನೀಡಿದ ಶಾಸಕ ಮುನವಳ್ಳಿ - ಜಾತ್ರೆಗೆ ಸ್ಥಳೀಯ ವಾಲ್ಮಿಕಿ ಸಮಾಜ
ಇದೇ ಫೆ.8 ಮತ್ತು 9ರಂದು ನಡೆಯುವ ಜಾತ್ರೆಗೆ ಸ್ಥಳೀಯ ವಾಲ್ಮೀಕಿ ಸಮಾಜದವರು ಅಕ್ಕಿ ನೀಡುವಂತೆ ಮನವಿ ಮಾಡಿದ ಹಿನ್ನೆಲೆ, ಸ್ಪಂದಿಸಿದ ಶಾಸಕರು ತಲಾ 25 ಕೆಜಿಯುಳ್ಳ ನಾಲ್ಕು ನೂರು ಅಕ್ಕಿ ಚೀಲಗಳನ್ನು ಕಳಿಸಿದ್ದಾರೆ..
![ರಾಜನಹಳ್ಳಿಯ ಜಾತ್ರೆಗೆ ನೂರು ಕ್ವಿಂಟಲ್ ಅಕ್ಕಿ ದೇಣಿಗೆ ನೀಡಿದ ಶಾಸಕ ಮುನವಳ್ಳಿ Rajanahalli fair](https://etvbharatimages.akamaized.net/etvbharat/prod-images/768-512-10526965-73-10526965-1612621566364.jpg)
ಅಕ್ಕಿ ದೇಣಿಗೆ ನೀಡಿದ ಶಾಸಕ ಮುನವಳ್ಳಿ
ಇದೇ ಫೆ.8 ಮತ್ತು 9ರಂದು ನಡೆಯುವ ಜಾತ್ರೆಗೆ ಸ್ಥಳೀಯ ವಾಲ್ಮೀಕಿ ಸಮಾಜದವರು ಅಕ್ಕಿ ನೀಡುವಂತೆ ಮನವಿ ಮಾಡಿದ ಹಿನ್ನೆಲೆ, ಸ್ಪಂದಿಸಿದ ಶಾಸಕರು ತಲಾ 25 ಕೆಜಿಯುಳ್ಳ ನಾಲ್ಕು ನೂರು ಅಕ್ಕಿ ಚೀಲಗಳನ್ನು ಕಳಿಸಿದ್ದಾರೆ.
ಸುಮಾರು ನಾಲ್ಕು ಲಕ್ಷ ಮೌಲ್ಯದ ಅಕ್ಕಿಯನ್ನು ದೇಣಿಗೆ ರೂಪದಲ್ಲಿ ನೀಡಿದ ಬಳಿಕ ಮಾತನಾಡಿದ ಅವರು, ವಾಲ್ಮೀಕಿ ಸಮಾಜದ ಜಾತ್ರೆಗೆ ಕಳೆದ ಮೂರು ವರ್ಷದಿಂದಲೂ ತನ್ನ ಕೈಲಾದ ದೇಣಿಗೆ ನೀಡುತ್ತಿದ್ದೇನೆ ಎಂದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಹಾಜರಿದ್ದರು.