ಕೊಪ್ಪಳ:ನಿನ್ನೆ ರಾತ್ರಿಯಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಮಣ್ಣಿನ ಮನೆಯೊಂದು ಕುಸಿದು ಬಿದ್ದು, ಆಕಳ ಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ನಡೆದಿದೆ.
ನಿರಂತರವಾಗಿ ಸುರಿದ ಮಳೆಗೆ ಮಣ್ಣಿನ ಮನೆ ಕುಸಿತ: ಆಕಳ ಕರು ಸಾವು - ಕುಕನೂರು ತಾಲೂಕಿನ ಬೆಣಕಲ್ ಗ್ರಾಮ
ಬೆಣಕಲ್ ಗ್ರಾಮದ ಚನ್ನಪ್ಪ ಬಳಗೇರಿ ಎಂಬುವವರ ಮಣ್ಣಿನ ಮನೆ ಕುಸಿತವಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ. ನಿರಂತರವಾಗಿ ಮಳೆಯಾದ ಹಿನ್ನೆಲೆ ಶಿಥಿಲಗೊಂಡ ಮನೆ ಮಧ್ಯರಾತ್ರಿ ವೇಳೆ ಮೇಲ್ಛಾವಣಿ ಸಮೇತ ಕುಸಿದಿದೆ.
ನಿರಂತರವಾಗಿ ಸುರಿದ ಮಳೆಗೆ ಮಣ್ಣಿನ ಮನೆ ಕುಸಿತ, ಆಕಳು ಕರು ಸಾವು
ಬೆಣಕಲ್ ಗ್ರಾಮದ ಚನ್ನಪ್ಪ ಬಳಗೇರಿ ಎಂಬುವವರ ಮಣ್ಣಿನ ಮನೆ ಕುಸಿತವಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ. ನಿರಂತರವಾಗಿ ಮಳೆಯಾದ ಹಿನ್ನೆಲೆ ಶಿಥಿಲಗೊಂಡ ಮನೆ ಮಧ್ಯರಾತ್ರಿ ವೇಳೆ ಮೇಲ್ಛಾವಣಿ ಸಮೇತ ಕುಸಿದಿದೆ.
ಮನೆಯಲ್ಲಿದ್ದ ಒಂದು ಆಕಳ ಕರು ಸಾವನ್ನಪ್ಪಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಘಟನೆ ನಡೆದಿದೆ.
Last Updated : Sep 26, 2020, 1:01 PM IST