ಕರ್ನಾಟಕ

karnataka

ETV Bharat / state

ಒಂದು ಮತದಿಂದ ಪರಾಭವಗೊಂಡ ಎಂಎಸ್​​ಸಿ ಪದವೀಧರೆ

ಎದುರಾಳಿ ರೇಣುಕಾ ಯಮುನಪ್ಪ 380 ಮತಗಳನ್ನು ಪಡೆದುಕೊಂಡರೆ, ವಿಶಾಲಾಕ್ಷಿ ಅವರಿಗೆ 379 ಮತಗಳು ಬಂದಿದ್ದವು.

msc-graduate-loses-panchayat-poll-with-one-vote
ಒಂದು ಮತದಿಂದ ಪರಾಭವಗೊಂಡ ಎಂಎಸ್​​ಸಿ ಪದವೀಧರೆ

By

Published : Dec 30, 2020, 5:09 PM IST

ಗಂಗಾವತಿ (ಕೊಪ್ಪಳ):ಗ್ರಾಮ ಸೇವೆಯ ನೂರಾರು ಕನಸು ಕಂಡು ಚುನಾವಣೆಗೆ ಸ್ಪರ್ಧಿಸಿದ್ದ ಎಂಎಸ್​​ಸಿ ಪದವೀಧರೆಯೊಬ್ಬರು ಜಿದ್ದಾಜಿದ್ದಿನಿಂದ ಕೂಡಿದ್ದ ಅಖಾಡದಲ್ಲಿ ಕೇವಲ ಒಂದು ಮತದಿಂದ ಪರಾಭವಗೊಂಡಿದ್ದಾರೆ.

ಕಾರಟಗಿ ತಾಲ್ಲೂಕಿನಲ್ಲಿ ಅನುಸೂಚಿತ ಮಹಿಳಾ ಕ್ಷೇತ್ರಕ್ಕೆ ಮೀಸಲಾಗಿದ್ದ ಕನಕಗಿರಿ ವಿಧಾನಸಭಾ ಕ್ಷೇತ್ರದ ಹುಳ್ಕಿಹಾಳ ಗ್ರಾಮ ಪಂಚಾಯಿತಿಯ ವಾಡ್ ನಂಬರ್ 2 ತೊಂಡಿಹಾಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿಶಾಲಾಕ್ಷಿ ಮಂಜುನಾಥ ನಾಯಕ್ ಸೋಲೊಪ್ಪಿಕೊಂಡ ಅಭ್ಯರ್ಥಿಯಾಗಿದ್ದಾರೆ.

ಎದುರಾಳಿ ರೇಣುಕಾ ಯಮುನಪ್ಪ 380 ಮತಗಳನ್ನು ಪಡೆದುಕೊಂಡರೆ, ವಿಶಾಲಾಕ್ಷಿ 379 ಮತಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ವಿಶಾಲಾಕ್ಷಿ ಪತಿ ಮಂಜುನಾಥ್, ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇ ಸುಗೂರು ಅವರ ಆಪ್ತಸಹಾಯಕ ಎಂಬುವುದು ಗಮನಿಸಬೇಕಾದ ಅಂಶ.

ಓದಿ:ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೃತ ಅಭ್ಯರ್ಥಿಗೆ ಗೆಲುವು

ABOUT THE AUTHOR

...view details