ಕೊಪ್ಪಳ:ಆನ್‌ಲೈನ್ ಶಿಕ್ಷಣಕ್ಕಾಗಿ ಮೊಬೈಲ್ ಇಲ್ಲದೆ ಪರದಾಡುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ನಿನ್ನೆ ನೀಡಿದ್ದ ಭರವಸೆಯಂತೆ ಸಂಸದ ಸಂಗಣ್ಣ ಕರಡಿ ಎರಡು ಮೊಬೈಲ್ ಕೊಡಿಸಿದರು.
ಇಲ್ಲಿನ ಗಾಂಧಿ ನಗರದ 8 ನೇ ತರಗತಿಯಲ್ಲಿ ಓದುತ್ತಿರುವ ಗಿರಿಜಾ ಹಾಗೂ 10 ನೇ ತರಗತಿ ಓದುತ್ತಿರುವ ಪ್ರೀತಿ ಎಂಬ ಬಡ ಕುಟುಂಬದ ಸಹೋದರಿಯರು ಆನ್‌ಲೈನ್ ಶಿಕ್ಷಣಕ್ಕಾಗಿ ಮೊಬೈಲ್ ಇಲ್ಲದೆ ಪರದಾಡುತ್ತಿದ್ದರು. ಅಲ್ಲದೇ, ಯಾರಾದರೂ ದಾನಿಗಳು ನೆರವು ನೀಡುವಂತೆ ಭಿತ್ತಿಪತ್ರ ಹಿಡಿದು ಮನವಿ ಮಾಡಿಕೊಂಡಿದ್ದರು.