ಕರ್ನಾಟಕ

karnataka

ETV Bharat / state

ನಿಮ್ಮ ಹೆಸರಲ್ಲೇ ದಾಸ್ಯವಿದೆ.. ಮತ್ತೆ ಪ್ರಿಯಾಂಕ್ ಖರ್ಗೆಯನ್ನು ಕೆಣಕಿದ ಸಂಸದ ಪ್ರತಾಪ್ ಸಿಂಹ - ಪ್ರಿಯಾಂಕ್​ ಖರ್ಗೆ ಲೇವಡಿ ಮಾಡಿದ ಸಂಸದ

ಪ್ರಿಯಾಂಕ್ ಖರ್ಗೆ(Priyank Kharge)ಹೆಸರಿನಲ್ಲೇ ದಾಸ್ಯವಿದೆ, ನೀವು ಸೋನಿಯಾ ಮಗಳ ಹೆಸರು ಇಟ್ಟುಕೊಂಡಿದ್ದೀರಿ ಎಂದು ಸಂಸದ ಪ್ರತಾಪ್​ (Pratap Simha)ಸಿಂಹ ಮತ್ತೊಮ್ಮೆ ಮಾಜಿ ಸಚಿವ ಪ್ರಿಯಾಂಕ್​ ಖರ್ಗೆಯವರನ್ನು ಕೆಣಕಿದ್ದಾರೆ.

mp pratap simha teases priyank kharge again
ಪ್ರಿಯಾಂಕ್ ಖರ್ಗೆಯವರನ್ನು ಮತ್ತೆ ಕೆಣಕಿದ ಪ್ರತಾಪ್​ ಸಿಂಹ

By

Published : Nov 18, 2021, 5:20 PM IST

ಕೊಪ್ಪಳ:ನಮ್ಮ ಕ್ಯಾಪ್ಟನ್ ಬಸವರಾಜ ಬೊಮ್ಮಾಯಿ. ಆದರೆ ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯನದು ಒಂದು ಟೀಂ, ಡಿಕೆಶಿಯದು ಒಂದು ಟೀಂ ಇದೆ. ಕಾಂಗ್ರೆಸ್​​ನ ಕ್ಯಾಪ್ಟನ್​ ಯಾರು ಎಂದು ಹೇಳಲಿ ಎಂದು ಸಂಸದ ಪ್ರತಾಪ್​ ಸಿಂಹ(Pratap Simha) ಹೇಳಿದ್ದಾರೆ.

ಪ್ರಿಯಾಂಕ್ ಖರ್ಗೆಯವರನ್ನು ಮತ್ತೆ ಕೆಣಕಿದ ಪ್ರತಾಪ್​ ಸಿಂಹ

ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ 'ಜನ ಸ್ವರಾಜ್' (Jan swaraj)ಸಮಾವೇಶದಲ್ಲಿ ಮಾತನಾಡಿದ ಅವರು, ನಿಮ್ಮ ಕ್ಯಾಪ್ಟನ್ ಯಾರು? ಎಂದು ಕಾಂಗ್ರೆಸ್ ಮಿತ್ರರಿಗೆ ನಾವು ಕೇಳಲು ಬಯಸುತ್ತೇವೆ.‌ ಸಿದ್ದರಾಮಯ್ಯ ಅವರದ್ದು ಒಂದು ಟೀಂ, ಡಿಕೆಶಿಯದು ಮತ್ತೊಂದು ಟೀಂ. ಸಿದ್ದರಾಮಯ್ಯ ಅವರಿಗೆ ಗೌರಿ ಪಾಳ್ಯದ ನ್ಯಾಷನಲ್ ಟ್ರಾವೆಲ್ ವೈಸ್ ಕ್ಯಾಪ್ಟನ್‌, ಡಿಕೆಶಿಗೆ ಫರ್ಜಿ ಕೆಫೆಯ ಫುಡ್​​ ವೈಸ್ ಕ್ಯಾಪ್ಟನ್. ಇವರಿಗೆ ಅಧಿಕಾರ ಕೊಟ್ಟರೆ ಕರ್ನಾಟಕದಲ್ಲಿ ಕನ್ನಡಿಗರ ಸರ್ಕಾರ ಬರುವುದಿಲ್ಲ ತಾಲೀಬಾನ್ ಸರ್ಕಾರ ಬರುತ್ತದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಮರಿ ಖರ್ಗೆ ಹೆಸರಿನಲ್ಲೇ ಗಂಡೋ, ಹೆಣ್ಣೋ ಎಂಬ ಕ್ಲ್ಯಾರಿಟಿ ಇಲ್ಲ: ಪ್ರತಾಪ್​ ಸಿಂಹ ವಾಗ್ದಾಳಿ

ಮತ್ತೆ ಪ್ರಿಯಾಂಕ್ ಖರ್ಗೆ(Priyank Kharge) ಕೆಣಕಿದ ಸಂಸದ ಪ್ರತಾಪ್ ಸಿಂಹ, ನನ್ನ ಅಪ್ಪನ ಹೆಸರು ಯಾರಿಗೂ ಗೊತ್ತಿಲ್ಲ. ನಾನು ಅಪ್ಪನ ಹೆಸರು ಹೇಳಿಕೊಂಡು ಬೆಳೆದಿಲ್ಲ. ನಾನು ಪೇಪರ್ ಸಿಂಹನೇ ಹೌದು. ಅಲ್ಲಿ ಸೋನಿಯಾ ಮಗಳು ಪ್ರಿಯಾಂಕಾ, ಇಲ್ಲಿ ಉಪೇಂದ್ರ ಪತ್ನಿ ಪ್ರಿಯಾಂಕಾ. ನಿಮ್ಮಲ್ಲೇ ಪ್ರಿಯಾಂಕ ಎಂದು ಕರೆದರೆ ಮಹಿಳೆಯರೇ ತಿರುಗಿ ನೋಡ್ತಾರೆ. ಪ್ರಿಯಾಂಕ್ ಖರ್ಗೆ ಹೆಸರಿನಲ್ಲೇ ದಾಸ್ಯವಿದೆ. ನೀವು ಸೋನಿಯಾ ಮಗಳ ಹೆಸರು ಇಟ್ಟುಕೊಂಡಿದ್ದೀರಿ. ಶೋಷಿತ ವರ್ಗದ ನಿಮಗೆ ರಾಜ್ಯಾದ್ಯಂತ ಬಂಗಲೆಗಳು ಇವೆ. ನೀವು ಬಿಟ್ ಕಾಯಿನ್(Bitcoin) ಬಗ್ಗೆ ಕೇಳುತ್ತೀರಿ. ಆದರೆ, ಚುನಾವಣಾ ಆಯೋಗಕ್ಕೆ ಸಾಕಷ್ಟು ಮನೆ ಇರುವ ಮಾಹಿತಿಯನ್ನೇ ನೀಡಿಲ್ಲ. ರಫೇಲ್​​ನಲ್ಲಿ ಅಮ್ಮ- ಮಗ ಹಗರಣ ಮಾಡಿದ್ದಾರೆ ಅಂತಾ ಗೊತ್ತಾಯಿತು. ಅದಕ್ಕೆ ಈಗ ಬಿಟ್ ಕಾಯಿನ್ ಹಿಡಿದುಕೊಂಡಿದ್ದಾರೆ ಎಂದು ಪ್ರತಾಪ್​​ ಸಿಂಹ ತಿರುಗೇಟು ನೀಡಿದರು.

ABOUT THE AUTHOR

...view details