ಕುಷ್ಟಗಿ: ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರಿಗೆ ಈ ಬಾರಿ ಕೇಂದ್ರ ಸರ್ಕಾರದ ಸಚಿವ ಸ್ಥಾನದ ಮನ್ನಣೆ ನೀಡಬೇಕೆಂದು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಮಹಿಬೂಬ ಸಾಬ್ ಮುಲ್ಲಾ ಸಿದ್ದಾಪೂರ, ತಾಲೂಕು ಅಧ್ಯಕ್ಷ ಅಮೀನುದ್ದೀನ್ ಮುಲ್ಲಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕೊಪ್ಪಳ ಸಂಸದ ಕರಡಿ ಸಂಗಣ್ಣರನ್ನು ಕೇಂದ್ರ ಮಂತ್ರಿ ಮಾಡುವಂತೆ ಜೆ.ಪಿ.ನಡ್ಡಾಗೆ ಮನವಿ - Koppala
ಕೊಪ್ಪಳ ಸಂಸದರಾಗಿ ರಚನಾತ್ಮಕ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಕರಡಿ ಸಂಗಣ್ಣ ಅವರಿಗೆ ಈ ಬಾರಿ ಕೇಂದ್ರ ಸಚಿವ ಸ್ಥಾನ ಸಿಗಲೇಬೇಕು ಎಂದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಮನವಿ ಸಲ್ಲಿಸಲಾಗಿದೆ.
![ಕೊಪ್ಪಳ ಸಂಸದ ಕರಡಿ ಸಂಗಣ್ಣರನ್ನು ಕೇಂದ್ರ ಮಂತ್ರಿ ಮಾಡುವಂತೆ ಜೆ.ಪಿ.ನಡ್ಡಾಗೆ ಮನವಿ Appeal to JP Nadda](https://etvbharatimages.akamaized.net/etvbharat/prod-images/768-512-9092651-857-9092651-1602121206866.jpg)
ಸದ ಕರಡಿ ಸಂಗಣ್ಣ ಕೇಂದ್ರ ಮಂತ್ರಿಯಾಗಲಿ: ಜೆ.ಪಿ. ನಡ್ಡಾಗೆ ಮನವಿ
ಕೊಪ್ಪಳ ಸಂಸದರಾಗಿ ರಚನಾತ್ಮಕ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಕರಡಿ ಸಂಗಣ್ಣ ಅವರಿಗೆ ಈ ಬಾರಿ ಕೇಂದ್ರ ಸಚಿವ ಸ್ಥಾನ ಸಿಗಲೇಬೇಕು. ಅವರು ಯಾವುದೇ ಖಾತೆಯ ಜವಾಬ್ದಾರಿ ವಹಿಸಿದರೂ ಸಮರ್ಥವಾಗಿ ನಿಭಾಯಿಸಬಲ್ಲರು. ಕಲ್ಯಾಣ ಕರ್ನಾಟಕದಿಂದ ಪ್ರಾದೇಶಿಕವಾಗಿಯೂ ಈ ಬಾರಿ ಸಚಿವ ಸ್ಥಾನದ ಮನ್ನಣೆ ಸಿಗಬೇಕೆಂದು ಮನವಿಯಲ್ಲಿ ವಿವರಿಸಲಾಗಿದೆ.