ಕೊಪ್ಪಳ :ಕೊಪ್ಪಳ ಜಿಲ್ಲೆಯ ಕಿಷ್ಕಿಂದೆ ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಎಂಬುದಕ್ಕೆ ಹಲವಾರು ಸಾಕ್ಷ್ಯಾಧಾರಗಳು ಇದ್ದಾಗ್ಯೂ ಈ ಹಿಂದೆ ಆಂಧ್ರಪ್ರದೇಶದ ಟಿಟಿಡಿ (ತಿರುಪತಿ)ಯು ಆಂಜನೇಯನ ಜನ್ಮಸ್ಥಳ ಎಂದು ವಿವಾದ ಸೃಷ್ಠಿಸಿತ್ತು.
ಆಂಜನೇಯ ಹೆಸರಲ್ಲಿ ಟಿಟಿಡಿ ಮತ್ತು ಮಹಾರಾಷ್ಟ್ರದಿಂದ ಮತ್ತೆ ತಗಾದೆ ಆ ವಿಚಾರವಾಗಿ ಅಂಜನಾದ್ರಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಗೋವಿಂದಾನಂದ ಸ್ವಾಮೀಜಿ ಅವರು ಕರ್ನಾಟಕದ ಪರವಾಗಿ ಟಿಟಿಡಿ ಅವರಗೆ ಭೇಟಿ ನೀಡಿ ಸಂಬಂಧಪಟ್ಟ ದಾಖಲೆಗಳನ್ನು ನೀಡಿ ಬಂದಿದ್ದರು. ಆ ವಿವಾದ ಒಂದೆಡೆ ತಣ್ಣಗಾಯಿತು ಎನ್ನುವಷ್ಟರಲ್ಲಿ ಇದೀಗ ಮತ್ತೆ ಇತ್ತ ಮಹಾರಾಷ್ಟ್ರ ಹನುಮನ ಜನ್ಮಸ್ಥಳದ ಬಗ್ಗೆ ವಿವಾದ ಹುಟ್ಟು ಹಾಕಿದೆ.
ಆಂಜನೇಯ ಹೆಸರಲ್ಲಿ ಟಿಟಿಡಿ ಮತ್ತು ಮಹಾರಾಷ್ಟ್ರದಿಂದ ಮತ್ತೆ ತಗಾದೆ ಈ ವಿಚಾರವಾಗಿ ಮಹಾರಾಷ್ಟ್ರದ ಅಂಜನೇರಿ ಗ್ರಾಮದಲ್ಲಿ ನಡೆದ ಧರ್ಮ ಸಂಸತ್ ಸಭೆಯಲ್ಲಿ ಭಾಗವಹಿಸಲು ಹೋಗಿದ್ದ ಅಂಜನಾರ್ದಿ ತೀರ್ಥ ಕ್ಷೇತ್ರದ ಅಧ್ಯಕ್ಷ ಗೋವಿಂದಾನಂದ ಸ್ವಾಮೀಜಿ ವಿರುದ್ಧ ಅಂಜನೇರಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ ಮಹಾರಾಷ್ಟ್ರದ ತ್ರೈಂಬಕೇಶ್ವರ ಠಾಣೆ ಪೊಲೀಸರಿಂದ ನೋಟಿಸ್ ಕೊಡಿಸಿದ್ದಾರೆ ಎನ್ನಲಾಗಿದೆ. ಆದರೆ, ಕೊಪ್ಪಳದ ಇತಿಹಾಸಕಾರರು ಕೊಪ್ಪಳದ ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಎಂದು ಪ್ರತಿಪಾದಿಸುತ್ತಿದ್ದಾರೆ.
ಆಂಜನೇಯನ ಹೆಸರಲ್ಲಿ ಟಿಟಿಡಿ-ಮಹಾರಾಷ್ಟ್ರದಿಂದ ಮತ್ತೆ ತಗಾದೆ ಈ ಕುರಿತು ಸಂಸದ ಸಂಗಣ್ಣ ಕರಡಿ ಪ್ರತ್ರಿಕ್ರಿಯಿಸಿ, ಕರ್ನಾಟಕದ ಐತಿಹಾಸಿಕ ಸ್ಥಳ ಹಂಪಿಗಿಂತ ಅಂಜನಾದ್ರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಹನುಮನ ಹೆಸರು ಹೇಳಿಕೊಂಡು ಮಹಾರಾಷ್ಟ್ರ, ಟಿಟಿಡಿ ವ್ಯಾಪಾರೀಕರಣಕ್ಕೆ ನಿಂತಿದ್ದಾರೆ. ಇದೀಗ ಎರಡು ರಾಜ್ಯಗಳು ಸುಕಾಸುಮ್ಮನೇ ವಿವಾದ ಹುಟ್ಟು ಹಾಕಿವೆ.
ರಾಮಾಯಣದಲ್ಲಿ ಕಿಷ್ಕಿಂದೆ ಪ್ರದೇಶವೇ ಹನುಮನು ಹುಟ್ಟಿದ ಸ್ಥಳ ಎಂದು ಉಲ್ಲೇಖವಿದೆ. ಇಷ್ಟಿದ್ದರೂ ಮಹಾರಾಷ್ಟ್ರ ಸುಮ್ಮನೆ ವಿವಾದ ಮಾಡಹೊರಟಿದೆ. ಇದನ್ನು ನಾನು ಖಂಡಸುತ್ತೇನೆ. ನಮ್ಮ ಬಳಿ ಇರೋ ದಾಖಲೆಗಳನ್ನ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಒತ್ತಡ ಹಾಕುತ್ತೇವೆ ಎಂದರು.