ಕರ್ನಾಟಕ

karnataka

ETV Bharat / state

7 ತಿಂಗಳ ಬಳಿಕ ನಗರದಲ್ಲಿ ಏಕೈಕ ಚಿತ್ರಮಂದಿರ ಆರಂಭ.. 50 ಪ್ರೇಕ್ಷಕರಿಂದ ಚಿತ್ರ ವೀಕ್ಷಣೆ - Movie theater opened in Gangavathi

ಬರೋಬ್ಬರಿ 7 ತಿಂಗಳ ಕಾಲ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳ ಪರದೆಯನ್ನು ಅಂತೂ - ಇಂತು ಸರಿಸಲಾಗಿದೆ. ಆದರೆ, ಬಹುಪಾಲು ಚಿತ್ರಮಂದಿರಗಳು ಖರ್ಚಿನ ಹೊರೆ ಹೊರಲಾಗದೇ ತಮ್ಮ ಎಂದಿನ ಚಟುವಟಿಕೆ ನಡೆಸಲು ಹಿಂದೇಟು ಹಾಕುತ್ತಿವೆ. ಇದರ ನಡುವೆ ಭವಿಷ್ಯದ ವಿಶ್ವಾಸ ಇಟ್ಟುಕೊಂಡ ಗಂಗಾವತಿ ತಾಲೂಕಿನ 13 ಚಿತ್ರಮಂದಿರಗಳ ಪೈಕಿ ಕೇವಲ ಒಂದು ಚಿತ್ರಮಂದಿರ ಮಾತ್ರ ಕಾರ್ಯಾರಂಭ ಮಾಡಿದೆ.

Movie theater opened in Gangavathi after 7 months
ಚಿತ್ರಮಂದಿರ ಆರಂಭ

By

Published : Oct 16, 2020, 6:57 PM IST

ಗಂಗಾವತಿ: ಬರೋಬ್ಬರಿ ಏಳು ತಿಂಗಳ ಸುಧೀರ್ಘ ಸಮಯದ ನಂತರ ಮೊದಲ ಬಾರಿಗೆ ಚಿತ್ರಮಂದಿರಗಳ ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ನೀಡಿದ್ದರಿಂದ ನಗರದಲ್ಲಿಯೂ ಚಿತ್ರಮಂದಿರ ಆರಂಭಕ್ಕೆ ಚಟುವಟಿಕೆ ನಡೆದಿವೆ.

ಚಿತ್ರಮಂದಿರ ಆರಂಭ

ನಗರದ ಏಳು, ಶ್ರೀರಾಮನಗರ, ಸಿದ್ದಾಪುರ ತಲಾ ಒಂದು, ಕಾರಟಗಿ ಹಾಗೂ ಕನಕಗಿರಿಯ ತಲಾ ಎರಡು, ಒಟ್ಟು 13 ಚಿತ್ರ ಮಂದಿರಗಳ ಪೈಕಿ ಗಂಗಾವತಿ ನಗರದಲ್ಲಿ ಕೇವಲ ಒಂದೇ ಒಂದು ಚಿತ್ರಮಂದಿರ ಆರಂಭವಾಯಿತು.

ಮಹಾತ್ಮ ಗಾಂಧಿ ವೃತ್ತದ ಸಮೀಪ ಇರುವ ಹೆಚ್​ಎಂಎಸ್​ ಚಿತ್ರಮಂದಿರ ಎಂದಿನಂತೆ ದಿನಕ್ಕೆ ನಾಲ್ಕು ಶೋ ಆಯೋಜಿಸಿತ್ತು. ಮಾರ್ನಿಂಗ್​ ಶೋಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿತ್ತು. 50ಕ್ಕೂ ಹೆಚ್ಚು ಜನ ಟಿಕೆಟ್ ಖರೀದಿಸಿ ಮೊದಲ ಶೋ ನೋಡಿದರು.

ಚಿತ್ರಮಂದಿರದ ಮಾಲೀಕ ಮಂಜುನಾಥ

ಇತ್ತೀಚೆಗೆ ನಿಧನವಾದ ನಟ ಚಿರಂಜೀವಿ ಸರ್ಜಾ ಅವರ ಶಿವಾರ್ಜುನ ಚಿತ್ರವು ಈ ಸಿನಿಮಾ ಮಂದಿರದಲ್ಲಿ ತೆರೆ ಕಂಡಿತ್ತು. ಕೇವಲ 50 ಪ್ರೇಕ್ಷಕರಿಂದ ಚಿತ್ರಮಂದಿರದ ನಿರ್ವಹಣೆಯ ಖರ್ಚು ಸಿಗದು. ಆದರೆ, ಈ ಸಂಖ್ಯೆ ಮುಂದಿನ ದಿನಗಳಲ್ಲಿ ಜನರಲ್ಲಿ ವಿಶ್ವಾಸ ಮೂಡಿಸಬಲ್ಲದು. ಮುಂದಿನ ದಿನಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಬಹುದು ಎಂದು ಮಾಲೀಕ ಮಂಜುನಾಥ ಹೇಳಿದರು.

ABOUT THE AUTHOR

...view details