ಕುಷ್ಟಗಿ(ಕೊಪ್ಪಳ):ಕೊರೊನಾ ವೈರಸ್ ನಿಯಂತ್ರಿಸಲು ಜಿಲ್ಲಾಧಿಕಾರಿಗಳು, ಮಾಸ್ಕ್ ಕಡ್ಡಾಯಗೊಳಿಸಿರುವ ಹಿನ್ನೆಲೆ ಕುಷ್ಟಗಿ ಪಿಎಸ್ಐ ಚಿತ್ತರಂಜನ್ ನಾಯಕ್ ಅವರು, ಮಾಸ್ಕ್ ಧರಿಸದವರ ವಿರುದ್ಧ ಕಾರ್ಯಾಚರಣೆ ನಡೆಸಿದ್ರು.
ಕೋವಿಡ್ ಸುರಕ್ಷತೆ ಉಲ್ಲಂಘನೆ... ಮಾಸ್ಕ್ ಧರಿಸದವರಿಗೆ ಖಾಕಿ ದಂಡದ ಬಿಸಿ - fine for not wearing mask
ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದ ವಾಹನಸವಾರರಿಗೆ ಪೊಲೀಸರು ದಂಡ ವಿಧಿಸಿದ್ದಾರೆ. 58 ಬೈಕ್ ಸವಾರರಿಗೆ ದಂಡದ ಬಿಸಿ ಮುಟ್ಟಿಸಿ 11,600ರೂ. ವಸೂಲಿ ಮಾಡಿ ಎಚ್ಚರಿಕೆ ನೀಡಿದ್ದಾರೆ.
ಕಾರ್ಯಾಚರಣೆ ಆರಂಭಿಸಿದ ಕೆಲವೇ ತಾಸುಗಳಲ್ಲಿ 58 ಬೈಕ್ ಸವಾರರಿಗೆ ದಂಡದ ಬಿಸಿ ಮುಟ್ಟಿಸಿ 11,600ರೂ. ವಸೂಲಿ ಮಾಡಿ ಆ ಕ್ಷಣ ಸಾರ್ವಜನಿಕರಲ್ಲಿ ಸಂಚಲನ ಸೃಷ್ಟಿಸಿದರು. ಈ ಕಾರ್ಯಾಚರಣೆಯಲ್ಲಿ ಮೊದಲಿಗೆ ಬೀದಿ ಬದಿ ವ್ಯಾಪಾರಸ್ಥರಿಗೆ ಮಾಸ್ಕ್ ಧರಿಸಿಯೇ ವ್ಯವಹರಿಸುವಂತೆ ಹಾಗೂ ಮಾಸ್ಕ್ ಧರಿಸಿದ ಗ್ರಾಹಕರೊಂದಿಗೆ ಮಾತ್ರ ವ್ಯವಹರಿಸುವಂತೆ ಸೂಚ್ಯವಾಗಿ ಹೇಳಿದರು.
ಇದೇ ವೇಳೆ ಮಾಸ್ಕ್ ಧರಿಸದೇ ಇದ್ದ ವಾಹನ ಸವಾರರಿಗೆ ಮುಲಾಜಿಲ್ಲದೇ 200 ರೂ. ದಂಡ ಹಾಕಿ 58 ಬೈಕ್ ಸವಾರರಿಂದ 11,600ರೂ. ಮೊತ್ತ ವಸೂಲಿ ಮಾಡಿದರು. ಮಾಸ್ಕ್ ಹಾಕದೇ ಜೇಬಿನಲ್ಲಿಟ್ಟುಕೊಂಡಿದ್ದ ಕೆಲವು ವಾಹನ ಸವಾರರಿಗೂ ದಂಡದ ಬಿಸಿ ಮುಟ್ಟಿಸಿರುವುದು ಕಂಡು ಬಂತು. ಇದೇ ವೇಳೆ ಮಾತನಾಡಿದ ಪಿಎಸ್ಐ ಚಿತ್ತರಂಜನ್ ನಾಯಕ್ , ಜನರು ಮನೆಯಿಂದ ಹೊರ ಬರುವುದಾದರೆ ಮಾಸ್ಕ್ ಧರಿಸುವುದು ರೂಢಿಯಾಗಬೇಕಿದೆ. ಕೊರೊನಾ ಸೋಂಕು ತಡೆಯಲು ಸರ್ಕಾರ ಜಾರಿಗೊಳಿಸಿರುವ ಸುರಕ್ಷತಾ ಮಾರ್ಗಸೂಚಿಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲು ಈ ಕಾರ್ಯಾಚರಣೆ ನಿರಂತರವಾಗಲಿದೆ ಎಂದ ಅವರು, ದಂಡದ ಉದ್ದೇಶ ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ ಎಂದರು.