ಕುಷ್ಟಗಿ: ಮಗನ ಶಿವಗಣಾರಾಧನೆ ಸಂದರ್ಭದಲ್ಲಿ ತಾಯಿಗೆ ಹೃದಯಾಘಾತವಾಗಿದೆ. ಹೀಗಾಗಿ, ಕೇವಲ 9 ದಿನಗಳ ಅಂತರದಲ್ಲಿ ತಾಯಿ ಮಗ ಇಬ್ಬರೂ ಸಾವಿಗೀಡಾದ ಘಟನೆ ನಡೆಯಿತು.
ಕುಷ್ಟಗಿ ಪಟ್ಟಣದ 14ನೇ ವಾರ್ಡ್ ಅಂಬೇಡ್ಕರ್ ನಗರದ ನಿವಾಸಿ ರವಿಕುಮಾರ ದುರಗಪ್ಪ ಕೆಂಗಾರಿ ಎಂಬುವವರು ಲೋ ಬಿಪಿಯಿಂದ ಕಳೆದ ಆ. 9ರಂದು ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಬುಧವಾರ ಶಿವಗಣಾರಾಧನೆ ಕಾರ್ಯಕ್ರಮಕ್ಕಾಗಿ ಬಂಧು ವರ್ಗವನ್ನು ಅಹ್ವಾನಿಸಿದ್ದರು. ರವಿಕುಮಾರ ಕೆಂಗಾರಿ ಶಿವಗಣಾರಾಧನೆಯ ಪೂಜೆಯ ಸಿದ್ಧತೆಯ ಸಂದರ್ಭದಲ್ಲಿ ಮಗನ ಅಗಲಿಕೆಯ ಕೊರಗಿನಲ್ಲಿದ್ದ ತಾಯಿಗೆ ಹೃದಯಘಾತವಾಗಿ ಅವರು ಕೊನೆಯುಸಿರೆಳೆದಿದ್ದಾರೆ.