ಗಂಗಾವತಿ:ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೀರು ನಿಂತು ಸೊಳ್ಳೆಗಳು ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿದ್ದು, ಮಲೇರಿಯಾ ರೋಗ ಹರಡುವ ಆತಂಕ ಜನರಲ್ಲಿ ಮನೆ ಮಾಡಿದೆ.
ನಿರಂತರ ಮಳೆಯಿಂದಾಗಿ ಸೊಳ್ಳೆ ಉತ್ಪತ್ತಿ: ಜನರಲ್ಲಿ ಮಲೇರಿಯಾ ಆತಂಕ - ಸೊಳ್ಳೆಗಳ ಜೀವನ ಚಕ್ರ
ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಿರಂತರ ಮಳೆ ಪರಿಣಾಮ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳ ಕಾಟ ಹೆಚ್ಚಾಗಿದ್ದು,ಜನರಲ್ಲಿ ಮಲೇರಿಯಾ ಭೀತಿ ಉಂಟಾಗಿದೆ. ಈ ಹಿನ್ನೆಲೆ ಅಧಿಕಾರಿಗಳು ಜನರಲ್ಲಿ ಜಾಗೃತಿಗೆ ಮುಂದಾಗಿದ್ದಾರೆ.
ಈ ಕುರಿತು ಆರೋಗ್ಯ ಇಲಾಖೆಯ ಮಲೇರಿಯಾ ತಾಂತ್ರಿಕ ಮೇಲ್ವಿಚಾರಕ ದೇವೇಂದ್ರಗೌಡ ಮಾಹಿತಿ ನೀಡಿದರು. ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ 'ವಿಶ್ವ ಸೊಳ್ಳೆ ದಿನಾಚರಣೆ' ಅಂಗವಾಗಿ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸೊಳ್ಳೆಯಿಂದ ಹರಡುವ ರೋಗಗಳು, ಅವುಗಳಿಂದ ಹೇಗೆ ರಕ್ಷಣೆ ಪಡೆಯಬೇಕು, ಆರೋಗ್ಯದ ಬಗ್ಗೆ ಮುಂಜಾಗ್ರತೆ ಹೇಗೆ ವಹಿಸಬೇಕು ಎಂಬ ಕುರಿತ ತಾಂತ್ರಿಕ ಮಾಹಿತಿಯನ್ನು ಅವರು ನೀಡಿದರು.
ಇಲಾಖೆಯ ಮಲೇರಿಯಾ ತಡೆ ಸಂಪರ್ಕ ಅಧಿಕಾರಿ ರಮೇಶ ಮಾತನಾಡಿ, ಸೊಳ್ಳೆಗಳಿಂದ ಆಗಬಹುದಾದ ಅನಾಹುತ ಮತ್ತು ಸಂಭವನೀಯ ಸಮಸ್ಯೆಯಿಂದ ಹೇಗೆ ಪಾರಾಗುವುದು ಎಂಬುವುದರ ಬಗ್ಗೆ ತಿಳಿಸಿಕೊಟ್ಟರು. ಆರೋಗ್ಯ ಶಿಕ್ಷಣಾಧಿಕಾರಿ ಆಶಾ ಬೇಗಂ ಸೊಳ್ಳೆಗಳ ಜೀವನ ಚಕ್ರದ ಬಗ್ಗೆ ಮಾಹಿತಿ ನೀಡಿದರು.