ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಕದ್ರಳ್ಳಿ ಗ್ರಾಮದಲ್ಲಿ ಮೇಯಲು ಹೋಗಿದ್ದ ಸುಮಾರು 30 ಕ್ಕೂ ಹೆಚ್ಚು ಕುರಿಗಳು ಏಕಾಏಕಿ ಸಾವನ್ನಪ್ಪಿವೆ.
ಮೇಯಲು ಹೋಗಿದ್ದ 30 ಕ್ಕೂ ಹೆಚ್ಚು ಕುರಿಗಳು ಸಾವು... ಮಾಲೀಕರು ಕಂಗಾಲು - ಕುಕನೂರು ಪೊಲೀಸ್ ಠಾಣೆ
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕದ್ರಳ್ಳಿ ಗ್ರಾಮದಲ್ಲಿ ಮೇಯಲು ಹೋಗಿದ್ದ ಸುಮಾರು 30 ಕ್ಕೂ ಹೆಚ್ಚು ಕುರಿಗಳು ಏಕಾಏಕಿ ಸಾವನ್ನಪ್ಪಿವೆ.
ಕುರಿಗಳು ಸಾವು
ಗ್ರಾಮದ ಶಿವಪ್ಪ, ಹನುಮಪ್ಪ, ಬಸಪ್ಪ ಎಂಬುವವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ಅಡವಿಗೆ ಮೇಯಲು ಹೋದಾಗ ಏಕಾಏಕಿ ಈ ಕುರಿಗಳು ಸಾವನ್ನಪ್ಪಿದ್ದು, ಕೆಲವು ಕುರಿಗಳು ಅಸ್ವಸ್ಥಗೊಂಡಿವೆ.
ಈ ಕುರಿತು ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಸ್ಥಳಕ್ಕೆ ಆಗಮಿಸಿಲ್ಲ ಎಂದು ಕುರಿಗಳ ಮಾಲೀಕರು ಆರೋಪಿಸಿದ್ದಾರೆ. ಕೂಡಲೇ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ. ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.