ಗಂಗಾವತಿ (ಕೊಪ್ಪಳ):ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಅರವಿಂದ ಲಿಂಬಾವಳಿತಾಲೂಕಿನ ಪೌರಾಣಿಕ ಕ್ಷೇತ್ರವಾದ ಪಂಪಾಸರೋವರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಕೋತಿಗಳ ಹಸಿವು ತೀರಿಸಲು ಆಹಾರ ನೀಡಲು ಮುಂದಾದರು.
ಈ ಸಂದರ್ಭದಲ್ಲಿ ಬಾಳೆಹಣ್ಣಿನ ಗೊನೆಯನ್ನು ಸಚಿವರು ಕಟ್ಟೆಯ ಮೇಲಿಡುತ್ತಿದ್ದಂತೆಯೇ ಕೋತಿಗಳು ಗುಂಪಾಗಿ ಬಂದು ಗೊನೆಯಿಂದ ಹಣ್ಣು ಕಿತ್ತಿಕೊಂಡು ತಿನ್ನುತ್ತಿದ್ದವು. ಆಗ ಕೋತಿಯೊಂದು ನೇರ ಸಚಿವ ಅರವಿಂದ ಲಿಂಬಾವಳಿ ಹೆಗಲೇರಿ ಕುಳಿತುಕೊಂಡು ಹಣ್ಣು ತಿನ್ನುತ್ತಾ ಜನರ ಗಮನ ಸೆಳೆಯಿತು.