ಕೊಪ್ಪಳ:ತಾಲೂಕಿನ ಹ್ಯಾಟಿ ಗ್ರಾಮದಲ್ಲಿರುವ ಹೊನ್ನಲಾಂಬಿಕ ದೇವಸ್ಥಾನದ ಹುಂಡಿ ಕಳ್ಳತವಾಗಿದೆ. ನಿನ್ನೆ ರಾತ್ರಿ ವೇಳೆ ಕಳ್ಳರು ಹುಂಡಿ ಒಡೆದು ಅದರಲ್ಲಿನ ಹಣವನ್ನು ದೋಚಿಕೊಂಡು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಕೊಪ್ಪಳ: ದೇವಸ್ಥಾನದ ಹುಂಡಿ ಕಳ್ಳತನ - ಬೆಳ್ಳಿ ಮೂರ್ತಿ ಕಳವು
ನಿನ್ನೆ ರಾತ್ರಿ ವೇಳೆ ಕಳ್ಳರು ಹುಂಡಿ ಒಡೆದು ಅದರಲ್ಲಿನ ಹಣವನ್ನು ದೋಚಿಕೊಂಡು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಹತ್ತಾರು ಸಾವಿರ ರೂಪಾಯಿ ಸಂಗ್ರಹವಾಗಿತ್ತು ಎಂದು ಹೇಳಲಾಗುತ್ತಿದೆ.
![ಕೊಪ್ಪಳ: ದೇವಸ್ಥಾನದ ಹುಂಡಿ ಕಳ್ಳತನ temple robbery](https://etvbharatimages.akamaized.net/etvbharat/prod-images/768-512-8844397-221-8844397-1600409747947.jpg)
temple robbery
ಬೆಳಗ್ಗೆ ಗ್ರಾಮಸ್ಥರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಹುಂಡಿಯಲ್ಲಿ ಹತ್ತಾರು ಸಾವಿರ ರೂಪಾಯಿ ಸಂಗ್ರಹವಾಗಿತ್ತು ಎಂದು ಹೇಳಲಾಗುತ್ತಿದೆ.
ಹುಂಡಿ ಕಳ್ಳತನ
ಸುಮಾರು ಒಂದು ವರ್ಷದ ಹಿಂದೆ ಇದೇ ದೇವಸ್ಥಾನದಲ್ಲಿ ಬೆಳ್ಳಿ ಮೂರ್ತಿ ಕಳುವಾಗಿತ್ತು. ಈಗ ಹುಂಡಿ ಕಳ್ಳತನ ಮಾಡಿ, ನಗ ನಾಣ್ಯ ದೋಚಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.