ಕೊಪ್ಪಳ: ದೇಶದಲ್ಲಿ ಅನೇಕ ಸಮಸ್ಯೆಗಳಿವೆ. ಆ ಸಮಸ್ಯೆ ಬಗೆಹರಿಸುವುದು ಬಿಟ್ಟು ಕೇಂದ್ರ ಸರ್ಕಾರ ಧರ್ಮದ ಆಧಾರದಲ್ಲಿ ಜನರನ್ನು ಒಡೆಯಲು ಸಿಎಎ ಹಾಗೂ ಎನ್ಅರ್ಸಿ ಕಾಯ್ದೆಗಳನ್ನು ಜಾರಿ ಮಾಡಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ಮಹ್ಮದ್ ಸಲೀಂ ಮಂಡಲಗೇರಿ ಆರೋಪಿಸಿದರು.
ಮಹ್ಮದ್ ಸಲೀಂ ಮಂಡಲಗೇರಿ, ಮುಖಂಡರು, ಪ್ರಗತಿಪರ ಸಂಘಟನೆಗಳ ಒಕ್ಕೂಟ ಮೀಡಿಯಾ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಎ ಹಾಗೂ ಎನ್ಆರ್ಸಿ ವಿರೋಧಿಸಿ ಈಗಾಗಲೇ ದೇಶದಲ್ಲಿ ಪ್ರತಿಭಟನೆಗಳು ನಡೆದಿವೆ. ಇನ್ನೂ ಕೆಲವೆಡೆ ಪ್ರತಿಭಟನೆಗಳು ಮುಂದುವರೆಯುತ್ತಿವೆ. ಮಂಗಳೂರಿನಲ್ಲಿ ಇಬ್ಬರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದ್ದರಿಂದ ಮೃತಪಟ್ಟರು.
ಉತ್ತರ ಪ್ರದೇಶದಲ್ಲಿಯೂ ಪ್ರತಿಭಟನಾಕಾರರು ಮೇಲೆ ದೌರ್ಜನ್ಯ ನಡೆದಿದೆ. ದೇಶದಲ್ಲಿ ನಿರುದ್ಯೋಗವಿದೆ. ಜಿಡಿಪಿ ಕುಸಿತವಾಗಿದೆ. ಇನ್ನೂ ಅನೇಕ ಸಮಸ್ಯೆಗಳು ದೇಶದಲ್ಲಿದಲ್ಲಿದ್ದರೂ ಕೇಂದ್ರ ಸರ್ಕಾರ ಗಮನ ನೀಡುತ್ತಿಲ್ಲ. ಮಂಗಳೂರು ಘಟನೆಗೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಬಳ್ಳಾರಿ ಶಾಸಕ ಜಿ. ಸೋಮಶೇಖರ್ ರೆಡ್ಡಿ ಪ್ರಚೋದನಾತ್ಮಕ ಭಾಷಣ ಮಾತನಾಡಿದ್ದಾರೆ. ಹಾಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಧರ್ಮದ ಆಧಾರದಲ್ಲಿ ದೇಶದ ಜನರನ್ನು ವಿಭಜಿಸುವ ಕೇಂದ್ರ ಸರ್ಕಾರದ ನಡೆಯನ್ನ ಬಲವಾಗಿ ವಿರೋಧಿಸುತ್ತೇವೆ. ಎನ್ಅರ್ಸಿ ಹಾಗೂ ಸಿಎಎ ವಿರೋಧಿಸುತ್ತೇನೆ ಎಂದರು.