ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ ಪ್ರಾಣಿಗಳಿಂದ ಮರದ ದಿಮ್ಮಿ ಎಳೆಸಿ ಹಿಂಸೆ: ಪ್ರಾಣಿಪ್ರಿಯರ ಆಕ್ರೋಶ - Moharram Celebration

ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಮೊಹರಂ ಆಚರಣೆಗಾಗಿ ಪ್ರಾಣಿಗಳಿಂದ ಬೃಹತ್​ ಗಾತ್ರದ ಮರದ ದಿಮ್ಮಿಗಳನ್ನು ಎಳೆಸುವ ಮೂಲಕ ಪ್ರಾಣಿಗಳಿಗೆ ಹಿಂಸೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಪ್ರಾಣಿಗಳಿಗೆ ಹಿಂಸೆ

By

Published : Sep 8, 2019, 5:08 PM IST

Updated : Sep 8, 2019, 7:08 PM IST

ಕೊಪ್ಪಳ:ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಮೊಹರಂ ಆಚರಣೆ ಹಿನ್ನೆಲೆಯಲ್ಲಿ ಪ್ರಾಣಿಗಳಿಗೆ ದೊಡ್ಡ ಗಾತ್ರದ ಮರದ ದಿಮ್ಮಿಗಳನ್ನು ಎಳೆಸಲಾಗಿದೆ. ಹಬ್ಬದ ಆಚರಣೆ ಸಲುವಾಗಿ ನಡೆಯುವ ಇಂಥ ಕಂದಾಚರಣೆಗಳು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಮೊಹರಂ ಆಚರಣೆಗಾಗಿ ಬೃಹತ್ ಗಾತ್ರದ ಮರದ ತುಂಡುಗಳನ್ನು ಎತ್ತುಗಳಿಗೆ ಕಟ್ಟಿ ಎಳೆಸಲಾಗಿದೆ. ಸುಮಾರು ಅರ್ಧ ಕಿಲೋಮೀಟರ್‌ನಷ್ಟು ದೂರದಿಂದ ಮರದ ದಿಮ್ಮಿಗಳನ್ನು ಎತ್ತುಗಳಿಂದ ಎಳೆಸಿಕೊಂಡು ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೊಹರಂ ಆಚರಣೆ ಹಿನ್ನೆಲೆ ಪ್ರಾಣಿಗಳಿಗೆ ಹಿಂಸೆ

ಅಲ್ಲದೆ, ಆಚರಣೆ ಹೆಸರಿನಲ್ಲಿ ನೂರಾರು ಮರಗಳನ್ನು ಕಡಿದು ಹಾಕಲಾಗಿದೆ. ಅತೀ ಭಾರವಾದ ಮರದ ದಿಮ್ಮಿಗಳನ್ನು ಎತ್ತುಗಳಿಗೆ ಕಟ್ಟಿ ಎಳೆಸಿ ಅವುಗಳಿಗೆ ಹಿಂಸೆ ನೀಡಿದ್ದರೂ, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಪ್ರಾಣಿಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated : Sep 8, 2019, 7:08 PM IST

ABOUT THE AUTHOR

...view details