ಕೊಪ್ಪಳ:ಲೋಕಸಭಾ ಚುನಾವಣೆ ಹಿನ್ನೆಲೆ ಏಪ್ರಿಲ್ 12 ರಂದು ಭತ್ತದ ನಾಡು ಗಂಗಾವತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಪ್ರಧಾನಿಗಾಗಿ ದೆಹಲಿಯಿಂದ ಈಗಾಗಲೇ 2 ಕಾರುಗಳು ಗಂಗಾವತಿಗೆ ಬಂದು ನಿಂತಿವೆ.
ದಿಲ್ಲಿಯಿಂದ ಗಂಗಾವತಿಗೆ ಬಂತು ಚೌಕಿದಾರನ ಕಾರು... ಸಮಾವೇಶಕ್ಕೆ ಭರದ ಸಿದ್ಧತೆ - undefined
ಏಪ್ರಿಲ್ 12 ರಂದು ಗಂಗಾವತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ದೆಹಲಿ ಪಾಸಿಂಗ್ ಹೊಂದಿರುವ ಕಪ್ಪು ಬಣ್ಣದ 2 ಕಾರುಗಳು ಗಂಗಾವತಿಗೆ ಆಗಮಿಸಿವೆ.
ಮೋದಿಗಾಗಿ ದೆಹಲಿಯಿಂದ ಬಂದ ಕಾರು
ಹೆಲಿಪ್ಯಾಡ್ನಿಂದ ಸಮಾವೇಶದ ಸ್ಥಳಕ್ಕೆ ಮೋದಿ ಇದೇ ಕಾರಿನಲ್ಲಿ ಆಗಮಿಸಲಿದ್ದಾರೆ. ದೆಹಲಿ ಪಾಸಿಂಗ್ ಹೊಂದಿರುವ ಕಪ್ಪು ಬಣ್ಣದ ಒಂದು ಟೊಯಟೊ ಫಾರ್ಚುನರ್ ಹಾಗೂ ಒಂದು ಟಾಟಾ ಸಫಾರಿ ಗಂಗಾವತಿಗೆ ಆಗಮಿಸಿವೆ.
ಗಂಗಾವತಿ ನಗರ ಪೊಲೀಸ್ ಠಾಣೆ ಆವರಣದಲ್ಲಿ ಕಾರುಗಳು ಬಂದಿಳಿದಿವೆ. ಏಪ್ರಿಲ್ 12 ರಂದು ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಪರವಾಗಿ ಮೋದಿ ಪ್ರಚಾರ ನಡೆಸಲಿದ್ದಾರೆ. ಗಂಗಾವತಿಯ ಕನಕಗಿರಿ ರಸ್ತೆಯ ಕೃಷಿ ವಿಜ್ಞಾನ ಕೇಂದ್ರದ ಬಳಿ ಮೋದಿ ಕಾರ್ಯಕ್ರಮ ನಡೆಯಲಿದೆ.
Last Updated : Apr 10, 2019, 3:45 PM IST