ಕರ್ನಾಟಕ

karnataka

ETV Bharat / state

'ಮಕ್ಕಳ ಹೆರಲಾರದವರು, ನಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ'

ಸ್ವಂತ ಮಕ್ಕಳನ್ನು ಹೆರಲಾರದವರು, ನಮ್ಮ 17 ಜನ ಮಕ್ಕಳನ್ನು ಕರೆದುಕೊಂಡು ಹೋಗಿ ನಮ್ಮ ಮಕ್ಕಳು ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರು ಯಾವ ಶಾಸಕರನ್ನೂ ಕಳಿಸಿಲ್ಲ ಎಂದು ಸಿಎಂ ಇಬ್ರಾಹಿಂ ತಮ್ಮದೇ ಸ್ಟೈಲ್​​ನಲ್ಲಿ ತಿರುಗೇಟು ನೀಡಿದ್ದಾರೆ.

ಸಿಎಂ ಇಬ್ರಾಹಿಂ

By

Published : Aug 3, 2019, 3:34 PM IST

ಕೊಪ್ಪಳ:ಸ್ವಂತ ಮಕ್ಕಳನ್ನು ಹುಟ್ಟಿಸಲು ಆಗದವರು, ನಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ಸರ್ಕಾರ ರಚನೆ ಮಾಡಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸ್ವಂತ ಮಕ್ಕಳನ್ನು ಹೆತ್ತವರು, ನಾವು ಹೆತ್ತ 17 ಜನ ಮಕ್ಕಳನ್ನು ಕರೆದುಕೊಂಡು ಹೋಗಿ ನಮ್ಮ ಮಕ್ಕಳು ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರು ಯಾವ ಶಾಸಕರನ್ನೂ ಕಳಿಸಿಲ್ಲ. ಬಾಂಬೆ ಸೇಠು ಈ 17 ಜನ ಪತಿವ್ರತೆಯರನ್ನ ಕರೆದುಕೊಂಡು ಹೋಗಿ ಮೂರು ದಿನ ರೂಮಿನಲ್ಲಿಟ್ಟುಕೊಂಡು ವಾಪಾಸ್ ಕಳಿಸಿದ್ದಾನೆ. ಈಗ ಆ ಪತಿವ್ರತೆಯರೆಲ್ಲ ದೇವದಾಸಿಯರಾಗಿದ್ದಾರೆ. ಇವರದೆಲ್ಲ ತೀನ್ ದಿನ್ ಕಾ ಮಜಾ ಎಂದು ವ್ಯಂಗ್ಯವಾಡಿದರು.

ಮಾಧ್ಯಮದವರೊಂದಿಗೆ ಸಿಎಂ ಇಬ್ರಾಹಿಂ ಪ್ರತಿಕ್ರಿಯೆ

ಇನ್ನು ಸುಧಾಕರ್​ ಅವರು ತಮಗೆ ನೋವಾಗಿದೆ ಎಂದು ಹೇಳುತ್ತಿದ್ದಾರೆ. ಅವರಿಗೇನು ಹೆರಿಗೆಯಾಗಿದೆಯಾ? ಅವರೆಲ್ಲ ಹಾಳಾಗಿದ್ದೇವೆ ಅಂತ ಅಂದುಕೊಂಡು ಸಿದ್ದರಾಮಯ್ಯ ಅವರ ಹೆಸರು ಕೆಡಿಸುತ್ತಿದ್ದಾರೆ. ಈ 17 ಜನರು ಯಾಕೆ ಹೋಗಬೇಕಾಗಿತ್ತು? ನಡತೆಗೆಟ್ಟು ಹೊಸಿಲು ದಾಟಿದರೆ ಏನೂ ಮಾಡೋದಕ್ಕೆ ಆಗಲ್ಲ ಎಂದು ಸಿಎಂ ಇಬ್ರಾಹಿಂ ಹೇಳಿದರು.

ಯಡಿಯೂರಪ್ಪನವರು ಟಿಪ್ಪು ಜಯಂತಿ ರದ್ದು ಮಾಡಿಲ್ಲ. ಅವರ ಕಡೆಯಿಂದ ರದ್ದು ಮಾಡಿಸಲಾಗಿದೆ. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಈ ಹಿಂದೆ ಟಿಪ್ಪು ಜಯಂತಿ ಆಚರಣೆ ಮಾಡಿದ್ದಾರೆ. ಆದರೂ ಯಡಿಯೂರಪ್ಪ ಈಗ ಟಿಪ್ಪು ಜಯಂತಿಯನ್ನು ರದ್ದು ಮಾಡಿದ್ದಾರೆ. ಅದು ಸಂಘ ಪರಿವಾರದ ತೀರ್ಮಾನ ಇರಬಹುದೇನೋ ಗೊತ್ತಿಲ್ಲ. ಆದರೆ, ಟಿಪ್ಪು ಜಯಂತಿ ರದ್ದು ಮಾಡಿದ್ದಕ್ಕೆ ನಮಗೆ ಬೇಜಾರಿಲ್ಲ.‌ ಇಸ್ಲಾಂ ಧರ್ಮದಲ್ಲಿ ಪೂಜೆ, ಫೋಟೋಗೆ ಹಾರ ಹಾಕುವುದಕ್ಕೆ ಅವಕಾಶವಿಲ್ಲ. ಇಸ್ಲಾಂ ಧರ್ಮದಲ್ಲಿ ಜಯಂತಿ ಅಂದರೆ ಬಡವರಿಗೆ ಸಹಾಯ ಮಾಡುವುದು ಎಂದು ಸಿಎಂ ಇಬ್ರಾಹಿಂ ಹೇಳಿದರು.

ಇನ್ನು ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರ ಸಾವಿನ ಬಗ್ಗೆ ಸಿಎಂ ಇಬ್ರಾಹಿಂ ಅವರು ಇದೇ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details