ಕೊಪ್ಪಳ:ಯಡಿಯೂರಪ್ಪ ಹೆಸರು ಹೇಳಿಕೊಂಡು ಗೆದ್ದ ಜಿಲ್ಲೆಯ ಮೂವರು ಬಿಜೆಪಿ ಶಾಸಕರು ಯಡಿಯೂರಪ್ಪ ಸಂಕಷ್ಟದಲ್ಲಿದ್ದರೂ ಬಾಯಿ ಬಿಡುತ್ತಿಲ್ಲ ಎಂದು ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದ್ದಾರೆ.
ಬಿಎಸ್ವೈ ಹೆಸರು ಹೇಳಿಕೊಂಡು ಗೆದ್ದವರು ಅವರ ಕಷ್ಟಕ್ಕೆ ಆಗುತ್ತಿಲ್ಲ: ಶಿವರಾಜ ತಂಗಡಗಿ - shivaraj tangadagi
ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಬಿಜೆಪಿ ನಾಯಕರ ವಿರುದ್ಧ ಕೆಂಡಕಾರಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ಹಾಗೂ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಗೆದ್ದಿರೋದು ಮೋದಿಯಿಂದಲ್ಲ. ಯಡಿಯೂರಪ್ಪ ಅವರ ಹೆಸರು ಹೇಳಿಕೊಂಡು ಇವರು ಗೆದ್ದಿದ್ದಾರೆ. ಅವರ ಹೆಸರು ಹೇಳಿಕೊಂಡು ವೋಟ್ ಹಾಕಿಸಿಕೊಂಡು ಗೆದ್ದರು. ಆದರೆ, ಈಗ ಬಿ.ಎಸ್. ಯಡಿಯೂರಪ್ಪ ಸಂಕಷ್ಟದಲ್ಲಿದ್ದಾರೆ. ಅವರ ಸಂಕಷ್ಟಕ್ಕೆ ಈ ಶಾಸಕರು ನಿಲ್ತಿಲ್ಲ ಎಂದು ವ್ಯಂಗ್ಯವಾಡಿದರು.
ಇನ್ನು ನಾನು ಸಚಿವನಾಗಿದ್ದಾಗ ಬಿಜೆಪಿಯವರು ನನಗೆ ಅರಿಶಿಣ ಕುಂಕುಮ ಕಳಿಸಿದ್ದರು. ಈಗ ನಾನು ಸೀರೆ ಬಳೆ ಕಳಿಸುತ್ತೇನೆ ಎಂದು ಹೇಳಿದ ಕೂಡಲೇ ಈ ರೀತಿ ಮಾತನಾಡುತ್ತಿದ್ದಾರೆ. ಕರಡಿ ಸಂಗಣ್ಣ ಅವರು ಹಿರಿಯರಿದ್ದಾರೆ. ನಾನು ಮಂತ್ರಿಯಾಗಿದ್ದಾಗ ಅರಿಶಿಣ ಕುಂಕುಮ ಕಳಿಸಿದ ನಿಮ್ಮ ಕಾರ್ಯಕರ್ತರಿಗೆ ಈಗ ಯಾಕೆ ಏನೂ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು.