ಕರ್ನಾಟಕ

karnataka

ETV Bharat / state

ಕೊಪ್ಪಳ ಜಿಲ್ಲೆಯ ಮೊದಲ ಖಾಸಗಿ ಕೋವಿಡ್ ಆಸ್ಪತ್ರೆಗೆ ಶಾಸಕ ಪರಣ್ಣ ಮುನವಳ್ಳಿ ಭೇಟಿ

ನಗರದ ನಾನಾ ಖಾಸಗಿ ಆಸ್ಪತ್ರೆಯ ವೈದ್ಯರು ಒಗ್ಗೂಡಿ, ಜಿಲ್ಲಾಡಳಿತ ನೀಡಿದ್ದ ಶೇ.50 ಬೆಡ್‌ಗಳ ಬೇಡಿಕೆಗೆ ಸ್ಪಂದಿಸಿ ಇದೀಗ ಮೊದಲ ಹಂತದಲ್ಲಿ 30 ಬೆಡ್ ನೀಡಿದ್ದು, ಇನ್ನೂ ಕೆಲ ದಿನಗಳಲ್ಲಿ 70 ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತೆ..

By

Published : Aug 5, 2020, 7:30 PM IST

MLA visits first private Covid hospital Koppal
ಕೊಪ್ಪಳ ಜಿಲ್ಲೆಯ ಮೊದಲ ಖಾಸಗಿ ಕೋವಿಡ್ ಆಸ್ಪತ್ರೆಗೆ ಶಾಸಕ ಪರಣ್ಣ ಮುನವಳ್ಳಿ ಭೇಟಿ

ಗಂಗಾವತಿ :ಕೊಪ್ಪಳ ಜಿಲ್ಲೆಯ ಮೊದಲ ಖಾಸಗಿ ಕೋವಿಡ್ ಆಸ್ಪತ್ರೆಯನ್ನು ನಗರದ ಗುಂಡಮ್ಮ ಕ್ಯಾಂಪಿನಲ್ಲಿರುವ ಭಾಗೀರಥಿ ನರ್ಸಿಂಗ್ ಹೋಂನಲ್ಲಿ ಐಎಂಎ ಸಂಘಟನೆಯ ನೇತೃತ್ವದಲ್ಲಿ ಆರಂಭಿಸಲಾಗಿದೆ. ಬುಧವಾರ ಇದಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ಜಿಲ್ಲೆಯ ಮೊದಲ ಖಾಸಗಿ ಕೋವಿಡ್ ಆಸ್ಪತ್ರೆಗೆ ಶಾಸಕ ಪರಣ್ಣ ಮುನವಳ್ಳಿ ಭೇಟಿ

ಮೊದಲ ಖಾಸಗಿ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಪರಣ್ಣ ಮುನವಳ್ಳಿ, ಚಿಕಿತ್ಸಾಲಯದಲ್ಲಿ ರೋಗಿಗಳಿಗೆ ಸಿಗಲಿರುವ ನಾನಾ ವೈದ್ಯಕೀಯ ಸೌಲಭ್ಯಗಳ ಕುರಿತಾಗಿ ಪರಿಶೀಲನೆ ನಡೆಸಿದರು. ಬಳಿಕ ಸ್ಥಳದಲ್ಲಿದ್ದ ವೈದ್ಯರಿಂದ ಮಾಹಿತಿ ಪಡೆದರು. ನಗರದ ನಾನಾ ಖಾಸಗಿ ಆಸ್ಪತ್ರೆಯ ವೈದ್ಯರು ಒಗ್ಗೂಡಿ, ಜಿಲ್ಲಾಡಳಿತ ನೀಡಿದ್ದ ಶೇ.50 ಬೆಡ್‌ಗಳ ಬೇಡಿಕೆಗೆ ಸ್ಪಂದಿಸಿ ಇದೀಗ ಮೊದಲ ಹಂತದಲ್ಲಿ 30 ಬೆಡ್ ನೀಡಿದ್ದು, ಇನ್ನೂ ಕೆಲ ದಿನಗಳಲ್ಲಿ 70 ಬೆಡ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ಐಎಂಎ ಸಂಘಟನೆಯ ಪದಾಧಿಕಾರಿಗಳು ತಿಳಿಸಿದರು.

ಮಂಗಳವಾರ ರಾತ್ರಿಯೇ ಇಬ್ಬರು ಕೊರೊನಾ ಪಾಸಿಟಿವ್ ಸೋಂಕಿತರನ್ನು ತುರ್ತು ಚಿಕಿತ್ಸೆ ಕೊಡಬೇಕಿರುವ ಹಿನ್ನೆಲೆ ಖಾಸಗಿ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬುಧವಾರ ಸಾಂಕೇತಿಕವಾಗಿ ಧನ್ವಂತರಿ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಸ್ಪತ್ರೆಯ ಸೇವೆಗೆ ಚಾಲನೆ ನೀಡಲಾಯಿತು.

ABOUT THE AUTHOR

...view details