ಗಂಗಾವತಿ:ನಿಷೇಧಿತ ಸಂಘಟನೆ ಮತ್ತು ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿರುವ ಇನ್ನೂ ಎರಡರಿಂದ ಮೂರು ಜನ ಶಂಕಿತರು ನಗರದಲ್ಲಿದ್ದು, ಅವರನ್ನೂ ಪೊಲೀಸ್ ಇಲಾಖೆ ಬಂಧಿಸಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ಒತ್ತಾಯಿಸಿದ್ದಾರೆ.
ನಗರದಲ್ಲಿರುವ ಮೂವರು ಶಂಕಿತರನ್ನು ಬಂಧಿಸಲು ಶಾಸಕರ ಒತ್ತಾಯ - ETv Bharat Kannada
ಗಂಗಾವತಿ ಶಾಂತಿಯುತವಾಗಿದ್ದು, ಚುನಾವಣೆ ಸಮೀಪಿಸುತ್ತಿರುವ ಕಾರಣ ಶಾಂತಿ ಕದಡುವ ಉದ್ದೇಶದಿಂದ ಇಂತಹ ಚಟುವಟಿಕೆ ಗರಿಗೆದರುತ್ತವೆ. ಪೊಲೀಸರು ಶಾಂತಿ ಕದಡದಂತೆ ಕ್ರಮ ವಹಿಸಬೇಕು ಎಂದು ಪರಣ್ಣ ಮುನವಳ್ಳಿ ಹೇಳಿದ್ದಾರೆ.
ನಗರದ ಶಂಕಿತ ವ್ಯಕ್ತಿಯನ್ನು ಶಿವಮೊಗ್ಗದ ಪೊಲೀಸರು ಬಂಧಿಸಿ ವಿಚಾರಣೆಗೆ ಕರೆದೊಯ್ದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ, ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹಸಚಿವ ಆರಗ ಜ್ಞಾನೇಂದ್ರ ಅವರಿಗೂ ವೈಯಕ್ತಿಕ ಮನವಿ ಸಲ್ಲಿಸಿ ಒತ್ತಾಯಿಸುತ್ತೇನೆ. ಗಂಗಾವತಿ ಶಾಂತಿಯುತವಾಗಿದ್ದು, ಚುನಾವಣೆ ಸಮೀಪಿಸುತ್ತಿರುವ ಕಾರಣ ಶಾಂತಿ ಕದಡುವ ಉದ್ದೇಶದಿಂದ ಇಂತಹ ಚಟುವಟಿಕೆ ಗರಿಗೆದರುತ್ತವೆ. ನಗರದ ಶಾಂತಿಗಾಗಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿ ಶಂಕಿತರನ್ನು ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ನಾಲ್ಕು ವರ್ಷದಿಂದ ಪೊಲೀಸರಿಗೆ ಸಿಗದ ಆರೋಪಿ ಪತ್ನಿ ಜೊತೆ ಜಗಳವಾಡಿ ಸಿಕ್ಕಿಬಿದ್ದ