ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯಗೆ ಆರ್​ಎಸ್​ಎಸ್​ ಬಗ್ಗೆ ಕಿಂಚಿತ್​ ಜ್ಞಾನ ಇಲ್ಲ.. ಶಾಸಕ ಸೋಮಶೇಖರ ರೆಡ್ಡಿ - ಗಂಗಾವತಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಶಾಸಕ ಸೋಮಶೇಖರ ರೆಡ್ಡಿ ಆಕ್ರೋಶ

ಆರ್​ಎಸ್​ಎಸ್​ ಬಗ್ಗೆ ಸಿದ್ದರಾಮಯ್ಯ ಮಾತಾಡೋದು ತಪ್ಪು. ಸಂಘ ಪರಿವಾರದ ಬಗ್ಗೆ ಕಿಂಚಿತ್ ಜ್ಞಾನ ಅವರಿಗೆ ಇಲ್ಲ ಎಂದು ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ
ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ

By

Published : Jun 9, 2022, 7:25 PM IST

ಗಂಗಾವತಿ(ಕೊಪ್ಪಳ): ಇತ್ತ ಅಧಿಕಾರದಲ್ಲಿ ಇರದೆ ಅತ್ತ ಪಕ್ಷದಲ್ಲಿಯೂ ಸೂಕ್ತ ಸ್ಥಾನಮಾನ ಸಿಗದೇ ಕಂಗಲಾಗಿರುವ ಸಿದ್ದರಾಮಯ್ಯ ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ನೋಡಿದರೆ ಅವರಿಗೆ ಮತಿಭ್ರಮಣೆ ಆಗಿದೆ ಎಂದು ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಆರೋಪಿಸಿದ್ದಾರೆ.

ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿದರು

ಬಿಜೆಪಿ ನಾಯಕರು ಸೀಳು ನಾಯಿಗಳು ಎಂದು ಜರಿದ ಸಿದ್ದರಾಮಯ್ಯರ ಟೀಕೆಗೆ ಗಂಗಾವತಿಯಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ರೆಡ್ಡಿ, ನಾಯಿ ವಿಶ್ವಾಸದ ಸಂಕೇತ. ದೇವರ ಸ್ವರೂಪ. ಅಂಥಹ ನಾಯಿಯ ಹೆಸರು ಹೇಳಲು ಕೂಡ ಸಿದ್ದರಾಮಯ್ಯ ಅವರಿಗೆ ನೈತಿಕ ಹಕ್ಕಿಲ್ಲ ಅಂತಾ ಹೇಳಿಕೆ ನೀಡುವ ಮೂಲಕ ಸಿದ್ದರಾಮಯ್ಯ ತಮ್ಮ ಗೌರವ, ಘನತೆಗಳನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿಯಾಗಿ ಈ ತರಹ ಹಗುರವಾಗಿ ಮಾತುಗಳನ್ನು ಆಡುವುದು ಸರಿ ಅಲ್ಲ. ಆರ್​ಎಸ್​ಎಸ್​ ಬಗ್ಗೆ ಸಿದ್ದರಾಮಯ್ಯ ಮಾತಾಡೋದು ತಪ್ಪು. ಸಂಘ ಪರಿವಾರದ ಬಗ್ಗೆ ಕಿಂಚಿತ್ ಜ್ಞಾನ ಸಿದ್ದರಾಮಯ್ಯರಿಗೆ ಇಲ್ಲ. ಈಗಾಗಲೇ ಪಕ್ಷದಲ್ಲಿ ಏಕಾಂಗಿಯಾಗಿದ್ದು, ಅವರ ಭವಿಷ್ಯತ್ತಿನ ರಾಜಕೀಯದಿಂದ ಚಿಂತಾಕ್ರಾಂತರಾಗಿದ್ದಾರೆ. ಅವರಿಗೆ ದೇವರು ಒಳ್ಳೆ ಬುದ್ಧಿ ಕೊಡಲಿ ಎಂದು ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಹೇಳಿದರು.

ಓದಿ:ಸಿದ್ದರಾಮಯ್ಯ ಹಗುರವಾಗಿ ಮಾತನಾಡಿದಾಗ ಬಿಜೆಪಿಗರು ಕೈಕಟ್ಟಿ ಕೂರುವುದಕ್ಕಾಗುತ್ತಾ: ರೇಣುಕಾಚಾರ್ಯ ಪ್ರಶ್ನೆ

For All Latest Updates

TAGGED:

ABOUT THE AUTHOR

...view details