ಕರ್ನಾಟಕ

karnataka

ETV Bharat / state

ಬ್ಯಾನರ್​ನಲ್ಲಿ ತಮ್ಮ ಫೋಟೋ ಮಿಸ್ ಆಗಿದ್ದಕ್ಕೆ ಗರಂ ಆದ ಶಾಸಕ ಪರಣ್ಣ ಮುನವಳ್ಳಿ

ಇಂದು ಗಂಗಾವತಿ ನಗರದಲ್ಲಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಬ್ಯಾನರ್​ನಲ್ಲಿ ತಮ್ಮ ಫೋಟೋ ಮಿಸ್ ಆಗಿದ್ದಕ್ಕೆ ಶಾಸಕ ಪರಣ್ಣ ಮುನವಳ್ಳಿ ಗರಂ ಆಗಿ ಆಕ್ರೋಶಗೊಂಡರು.

ಸರ್ಕಾರಿ ಕಾರ್ಯಕ್ರಮಲ್ಲಿ ಜಿ ಪಂ ಅಧ್ಯಕ್ಷ ವಿಶ್ವನಾಥರೆಡ್ಡಿ, ಶಾಸಕ ಪರಣ್ಣ ಮುನವಳ್ಳಿ ನಡುವಿನ ಮಾತಿನ ಚಕಮಕಿ

By

Published : Mar 10, 2019, 3:17 PM IST

ಕೊಪ್ಪಳ: ಸರ್ಕಾರಿ ಕಾರ್ಯಕ್ರಮದ ಬ್ಯಾನರ್​ನಲ್ಲಿ ತಮ್ಮ ಹಾಗೂ ಸಂಸದರ ಫೋಟೋ ಮಿಸ್ ಆಗಿದ್ದಕ್ಕೆ ಆರೋಗ್ಯ ಇಲಾಖೆ ಸಚಿವರ ವಿರುದ್ಧ ಶಾಸಕ ಪರಣ್ಣ ಮುನವಳ್ಳಿ ಗರಂ ಆಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ.

ಗಂಗಾವತಿಯಲ್ಲಿ ಇಂದು ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಹಾಗೂ ಪಲ್ಸ್ ಪೋಲಿಯೋ ಲಸಿಕೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಈ ಘಟನೆ ನಡೆಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಹಾಕಲಾಗಿದ್ದ ಬ್ಯಾನರ್​ನಲ್ಲಿ ಕೇವಲ ಸಿಎಂ , ಡಿಸಿಎಂ ಹಾಗೂ ಆರೋಗ್ಯ ಇಲಾಖೆಯ ಸಚಿರ ಫೋಟೋ ಮಾತ್ರ ಹಾಕಲಾಗಿತ್ತು. ಇದರಿಂದ ಕುಪಿತಗೊಂಡ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಸಚಿವ ಶಿವಾನಂದ ಪಾಟೀಲ್ ಎದುರೇ ಅಸಮಧಾನ ವ್ಯಕ್ತಪಡಿಸಿದರು.

ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸರ್ಕಾರವೂ ಅನುದಾನ ನೀಡಿದೆ. ಆದರೆ, ಅದನ್ನು ಮರೆತು ಸ್ಥಳೀಯ ಶಾಸಕರ ಹಾಗೂ ಸಂಸದರ ಫೋಟೋವನ್ನು ಬ್ಯಾನರ್ನಲ್ಲಿ ಹಾಕದೆ ಕಡೆಗಣಿಸಲಾಗಿದೆ ಎಂದು ಗರಂ ಆದರು. ಶಾಸಕ ಪರಣ್ಣ ಮುನವಳ್ಳಿ ಗರಂ ಆಗುತ್ತಿದ್ದಂತೆಯೇ ಸಿಬ್ಬಂದಿ ವೇದಿಕೆಯ ಮೇಲಿದ್ದ ಆ ಬ್ಯಾನರ್ ಅನ್ನು ತೆರವುಗೊಳಿಸಿದರು.

ಸರ್ಕಾರಿ ಕಾರ್ಯಕ್ರಮಲ್ಲಿ ಜಿ ಪಂ ಅಧ್ಯಕ್ಷ ವಿಶ್ವನಾಥರೆಡ್ಡಿ, ಶಾಸಕ ಪರಣ್ಣ ಮುನವಳ್ಳಿ ನಡುವಿನ ಮಾತಿನ ಚಕಮಕಿ

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥರೆಡ್ಡಿ ಹಾಗೂ ಶಾಸಕ ಪರಣ್ಣ ಮುನವಳ್ಳಿ ನಡುವೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಆರೋಗ್ಯ ಇಲಾಖೆ ಸಚಿವ ಶಿವಾನಂದ ಪಾಟೀಲ್ ಅವರು ಶಾಸಕ ಪರಣ್ಣ ಮುನವಳ್ಳಿ ಅವರನ್ನು ಸಮಾಧಾನಪಡಿಸಿದರು. ಬಳಿಕ ಶಾಸಕ ಪರಣ್ಣ ಮುನವಳ್ಳಿ ಅವರ ಭಾವಚಿತ್ರವಿದ್ದ ಬ್ಯಾನರ್ ಅನ್ನು ವೇದಿಕೆ ಮೇಲೆಅಳವಡಿಸಲಾಯಿತು.

ABOUT THE AUTHOR

...view details