ಗಂಗಾವತಿ: ನಗರದ ಬಹುತೇಕ ವರ್ತಕರಿಗೆ ಗಂಜ್ ಭಾಗಕ್ಕೆ ತೆರಳಲು ಸಮೀಪವಾಗಿದ್ದ ಇಲ್ಲಿನ ಶಿವ ಟಾಕೀಸ್ ಸಮೀಪದ ಬಂಬೂಬಜಾರ-ರಾಣಿ ಚನ್ನಮ್ಮ ಮಾರ್ಗದ ರಸ್ತೆ ಸುಧಾರಣೆಗೆ ಕಾಲ ಕೂಡಿ ಬಂದಿದ್ದು, ಇಂದು ಶಾಸಕ ಪರಣ್ಣ ಮುನವಳ್ಳಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ಬಂಬೂಬಜಾರ-ರಾಣಿ ಚನ್ನಮ್ಮ ರಸ್ತೆ ಕಾಮಗಾರಿಗೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ.. - ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಪರಣ್ಣ ಮುನವಳ್ಳಿ
ನಗರದ ಬಂಬೂಬಜಾರ-ರಾಣಿ ಚನ್ನಮ್ಮ ಮಾರ್ಗದ ರಸ್ತೆ ಕಾಮಗಾರಿಗೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.

ಶಾಸಕ ಪರಣ್ಣ ಮುನವಳ್ಳಿ
ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಪರಣ್ಣ ಮುನವಳ್ಳಿ..
ರಸ್ತೆ ಸುಧಾರಣೆ, ಡಾಂಬರೀಕರಣ ಹಾಗೂ ಚರಂಡಿ ನಿರ್ಮಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಸಮೀಪ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿ, ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 96 ಲಕ್ಷ ರೂ. ಮೊತ್ತದಲ್ಲಿ ಒಂಬತ್ತು ಮೀಟರ್ನಷ್ಟು ರಸ್ತೆ ವಿಸ್ತರಿಸಿ ರಸ್ತೆ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಅಲ್ಲದೇ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರನಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.