ಗಂಗಾವತಿ :ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮಂಜೂರಾದ ಅನುದಾನದಲ್ಲಿ ನಿರ್ಮಾಣವಾಗಬೇಕಿದ್ದ ಸದ್ಭಾವನಾ ಸಭಾ ಭವನಕ್ಕೆ ಸೂಕ್ತ ಜಾಗ ಸಿಗದ ಹಿನ್ನೆಲೆ ಇಲ್ಲಿನ ಸರ್ಕಾರಿ ಜ್ಯೂ. ಕಾಲೇಜು ಮೈದಾನದಲ್ಲಿ ಶಾಸಕ ಪರಣ್ಣ ಮುನವಳ್ಳಿ ಭೂಮಿ ಪೂಜೆ ನೆರವೇರಿಸಿದರು.
ಸದ್ಭಾವನಾ ಸಭಾಭವನಕ್ಕೆ ಶಾಸಕ ಮುನವಳ್ಳಿ ಭೂಮಿ ಪೂಜೆ.. ಓದಿ: ಗಾಳಿ ಸುದ್ದಿ ಕೇಳಿ ಗೂಳಿಯಂತೆ ಬಂದು ಬೇಲಿ ಹಾಕಿದ್ರು.. ಪುಕ್ಕಟೆ ಭೂಮಿ ಪುಕಾರು ಎಂದು ತಿಳಿದು ಪೆಕ್ರಗಳಂತಾದ್ರು..
1.20 ಕೋಟಿ ರೂಪಾಯಿ ಮೊತ್ತದ ಅನುದಾನದಲ್ಲಿ ನಿರ್ಮಾಣವಾಗಬೇಕಿದ್ದ ಕಾಮಗಾರಿಗೆ, ಕಳೆದ ಎರಡು ವರ್ಷದಿಂದ ಸೂಕ್ತ ಸ್ಥಳ ಸಿಗದ ಹಿನ್ನೆಲೆ ಕನಿಷ್ಟ ಪಕ್ಷ ಉರ್ದು ಶಾಲೆಯ ಮಕ್ಕಳಿಗಾದ್ರೂ ಉಪಯೋಗವಾಗಲಿ ಎಂಬ ಕಾರಣಕ್ಕೆ ಸ್ಥಳ ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.
ನಿರ್ಮಿತಿ ಕೇಂದ್ರ ನಿರ್ಮಾಣದ ಜವಾಬ್ದಾರಿ ವಹಿಸಿದ್ದು, ನಿಗಧಿತ ಕಾಲಾವಧಿಯೊಳಗೆ ಗುಣಮಟ್ಟದ ಕಾಮಗಾರಿ ಮುಗಿಸಿಕೊಡುವಂತೆ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.