ಕುಷ್ಟಗಿ (ಕೊಪ್ಪಳ): ಕಾಂಗ್ರೆಸ್ ಕ್ಷೇತ್ರದ ಶಾಸಕರೆಂದು ಕ್ಷೇತ್ರದ ಜನತೆಯ ಹಿತಾಸಕ್ತಿಗಳಿಗೆ ಧಕ್ಕೆ ತರುವಂತಹ ಕೆಲಸವನ್ನು ಸಿ.ಎಂ ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಯಾವತ್ತಿಗೂ ಮಾಡಿಲ್ಲ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಶಾಸಕ ಬಯ್ಯಾಪುರ ಬಿಜೆಪಿಗೆ ಬಂದ್ರೂ ಬರಬಹುದು: ಸಚಿವ ಮಾಧುಸ್ವಾಮಿ - ಸಚಿವ ಮಾಧುಸ್ವಾಮಿ
ಕುಷ್ಟಗಿಯ ಕಡೇಕೊಪ್ಪ ಕ್ರಾಸ್ನಲ್ಲಿ ಕೆರೆ ತುಂಬಿಸುವ ಯೋಜನೆಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಮಾಧುಸ್ವಾಮಿ. ಈ ಕ್ಷೇತ್ರದ ಶಾಸಕ ಬಿಜೆಪಿಗೆ ಬಂದ್ರೂ ಬರಬಹುದು ಎಂದ ಸಚಿವರು.
ಸಚಿವ ಮಾಧುಸ್ವಾಮಿ
ಕುಷ್ಟಗಿಯ ಕಡೇಕೊಪ್ಪ ಕ್ರಾಸ್ನಲ್ಲಿ ಕೆರೆ ತುಂಬಿಸುವ ಯೋಜನೆಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷದವರು ಗೆಲ್ಲುವ ವಿಶ್ವಾಸದ ಹಿನ್ನೆಲೆಯಲ್ಲಿ ಯಾವುದೇ ಕ್ಷೇತ್ರವನ್ನು ಕಡೆಗಣಿಸುವುದಿಲ್ಲ. ಇದೇ ಚುನಾವಣೆ ಕೊನೆಯಾಗುವುದಿಲ್ಲ. ಮುಂದೆ ನಮ್ಮ ಪಕ್ಷಕ್ಕೆ ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಬಂದರೂ ಬರಬಹುದು. ಶಾಸಕರು ಯಾವುದೇ ಪಕ್ಷದಲ್ಲಿದ್ದರೂ ಶಾಸಕರೇ ಆಗಿರುತ್ತಾರೆ. ನಾವು ಹಾಗೂ ಬಯ್ಯಾಪೂರ ಅವರು, 30-40 ವರ್ಷದಿಂದ ಸ್ನೇಹಿತರು. ಶಾಸಕ ಬಯ್ಯಾಪೂರ ಅವರು ಈ ಕ್ಷೇತ್ರದಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ ಎಂದರು.