ಗಂಗಾವತಿ:ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯಲ್ಲಿ ಬರುವ ಪ್ರದೇಶದಲ್ಲಿನ ಯಾವ ಮೂಲೆಯಲ್ಲಿ ರೈತರ ಹೊಲಗದ್ದೆಗಳಿದ್ದರೂ ಒಣಗಲು ಬಿಡುವುದಿಲ್ಲ. ಬೆಳೆ ಪೂರ್ಣ ಪ್ರಮಾಣದಲ್ಲಿ ಬರುವವರೆಗೂ ನೀರು ಕೊಡುತ್ತೇವೆ ಎಂದು ಶಾಸಕ ಬಸವರಾಜ ದಡೇಸುಗೂರು ಹೇಳಿದರು.
ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯಲ್ಲಿ ಯಾವುದೇ ಹೊಲಗದ್ದೆ ಒಣಗಲು ಬಿಡುವುದಿಲ್ಲ: ಶಾಸಕ ದಡೇಸುಗೂರು - ಶಾಸಕ ಬಸವರಾಜ ದಡೇಸಗೂರು
ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯಲ್ಲಿ ಬರುವ ಪ್ರದೇಶದಲ್ಲಿನ ಯಾವ ಮೂಲೆಯಲ್ಲಿ ರೈತರ ಹೊಲಗದ್ದೆಗಳಿದ್ದರೂ ಬೆಳೆ ಒಣಗಲು ಬಿಡುವುದಿಲ್ಲ ಎಂದು ಶಾಸಕ ಬಸವರಾಜ ದಡೇಸುಗೂರು ಜನರಿಗೆ ಭರವಸೆ ನೀಡಿದ್ದಾರೆ.
ತುಂಗಭದ್ರಾ ಎಡದಂಡೆ ಕಾಲುವೆ ಪ್ರದೇಶಕ್ಕೆ ಶುಕ್ರವಾರ ಅಧಿಕಾರಿಗಳು, ರೈತರ ನಿಯೋಗದೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಶಾಸಕರು, ಏಪ್ರಿಲ್ 10ರ ವರೆಗೂ ನೀರು ಬಿಡುತ್ತೇವೆ ಎಂದು ಭರವಸೆ ನೀಡಲಾಗಿತ್ತು. ಇಂದು ಏಪ್ರಿಲ್ 16. ಹೀಗಾಗಿ ನೀರು ಬಿಡಲಾಗುವುದು. ಆದರೆ, ಎಷ್ಟು ದಿನ ನೀರು ಬಿಡಲಾಗುವುದು ಎಂದು ಖಚಿತವಾಗಿ ಹೇಳಲಾಗದು. ಯಾವೊಬ್ಬ ರೈತರ ಹೊಲಗದ್ದೆ ಒಣಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇನ್ನು ನೀರು ತರುವ ನಿಟ್ಟಿನಲ್ಲಿ ಸಾಕಷ್ಟು ವರ್ಕೌಟ್ ಮಾಡಿದ್ದೇವೆ. ಇದಕ್ಕೆ ಸಿಎಂ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ ಎಂದು ರೈತರಿಗೆ ಭರವಸೆ ನೀಡಿದರು.