ಗಂಗಾವತಿ (ಕೊಪ್ಪಳ) :ಸುಳ್ಳು ಹೇಳುವುದು, ಜನರ ದಾರಿತಪ್ಪಿಸುವಂತ ಚೀಪ್ ಪಾಲಿಟಿಕ್ಸ್ಗೆ ಮಾಜಿ ಸಚಿವ ಶಿವರಾಜ ತಂಗಡಗಿ ಇಳಿದಿದ್ದಾರೆ ಎಂದು ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ಆರೋಪಿಸಿದ್ದಾರೆ.
10 ವರ್ಷ ಕ್ಷೇತ್ರದಲ್ಲಿ ಶಾಸಕನಾಗಿದ್ದರೂ ಹೇಳಿಕೊಳ್ಳುವಂತ ಕೆಲಸ ಮಾಡಿಲ್ಲ. ತಂಗಡಗಿ ಸಚಿವನಾಗಿದ್ದಾಗಲೂ ಸಾಧನೆ ಶೂನ್ಯ. ಮುಂದೆ ಅವಕಾಶ ಸಿಕ್ಕರೂ ತಂಗಡಗಿ ಏನೂ ಮಾಡುವುದಿಲ್ಲ ಎಂದು ಗೊತ್ತಾದ ಬಳಿಕವೇ ಜನ ಸೂಕ್ತ ಪಾಠ ಕಲಿಸಿ ಮನೆಗೆ ಕಳುಹಿಸಿದ್ದಾರೆ ಎಂದರು.
ಮಾಜಿ ಸಚಿವ ದಡೇಸೂಗೂರು ವಿರುದ್ಧ ದಡೇಸೂಗೂರು ಕಿಡಿ ಬರೀ ಸುಳ್ಳುಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುವುದೇ ಇವರ ಕೆಲಸ. ಕೋವಿಡ್‌ನಂತಹ ಸಂಕಷ್ಟದ ಸ್ಥಿತಿಯಲ್ಲಿಯೂ ಸಹ ಜನರ ಆರೋಗ್ಯ ರಕ್ಷಣೆ ಹಾಗೂ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ವಿಚಾರದಲ್ಲಿ ಅವಿರತಶ್ರಮಿಸಿದ್ದೇನೆ.
ಕನಕಗಿರಿ ಕ್ಷೇತ್ರದಲ್ಲಿ ನಾನು ಯಾವ ರೀತಿ ಕೆಲಸ ಮಾಡುತ್ತಿದ್ದೀನಿ ಎಂದು ಜನರಿಗೆ ಗೊತ್ತಿದೆ. ಮಾಡಲು ಕೆಲಸ ಇಲ್ಲದ ಇಂತಹ ಮಾಜಿ ಸಚಿವನಿಂದ ನಾನು ಶಹಬ್ಬಾಸ್‌ಗಿರಿ ಪಡೆಯುವುದು ಬೇಕಿಲ್ಲ ಎಂದು ತಿರುಗೇಟು ನೀಡಿದರು.