ಗಂಗಾವತಿ (ಕೊಪ್ಪಳ):ಗದ್ದೆ ಒಣಗುತ್ತಿವೆ ನೀರು ಬಿಡಿ ಅಂತ ಯಾರೋ ಅಲ್ಪಸ್ವಲ್ಪ ಜ್ಞಾನ ಇರುವ ಕೆಲಸಕ್ಕೆ ಬಾರದ ಹುಡುಗಬಟ್ಟೆಗಳು ಮಾಡುವ ಪ್ರತಿಭಟನೆಗೆ ನಾವು ಗಮನ ಕೊಡಬೇಕಿಲ್ಲ ಎಂದು ಕಾಂಗ್ರೆಸ್ ಮುಖಂಡರಿಗೆ ಶಾಸಕ ಬಸವರಾಜ ದಡೇಸುಗೂರು ಪರೋಕ್ಷವಾಗಿ ಕಾಲೆಳೆದಿದ್ದಾರೆ.
ಕಾಲುವೆ ವೀಕ್ಷಣೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಲುವೆಗೆ ನೀರು ಯಾವ ಸಂದರ್ಭದಲ್ಲಿ ಎಷ್ಟು ಪ್ರಮಾಣದಲ್ಲಿ ಬಿಡಬೇಕು. ಹೇಗೆ ರೈತರನ್ನು ಮತ್ತು ಅವರ ಬೆಳೆ ರಕ್ಷಿಸಿಕೊಳ್ಳಬೇಕು ಎಂಬುವುದರ ಬಗ್ಗೆ ಆಡಳಿತ ನಡೆಸುವ ನಮಗೆ ಹಾಗೂ ಅಧಿಕಾರಿಗಳಿಗೆ ಸ್ಪಷ್ಟವಾಗಿ ಗೊತ್ತಿದೆ.