ಕರ್ನಾಟಕ

karnataka

ETV Bharat / state

ದೇಶದ್ರೋಹ ಘೋಷಣೆ ಕೂಗುವವರನ್ನು ದೇಶದಿಂದ ಹೊರಹಾಕಿ: ಬಸವರಾಜ್ ದಡೇಸಗೂರು - ದೇಶದ್ರೋಹ ಘೋಷಣೆ ಕೂಗುವವರನ್ನು ದೇಶದಿಂದ ಹೊರಹಾಕಿ

ದೇಶದ್ರೋಹ ಘೋಷಣೆ ಕೂಗುವವರು ಈ ದೇಶದಲ್ಲಿ ಇರಬಾರದು ಎಂದು ಜಿಲ್ಲೆಯ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ್ ದಡೇಸಗೂರು ಹೇಳಿದ್ದಾರೆ‌.

MLA Basavaraj dadesgooru
ಬಸವರಾಜ್ ದಡೇಸಗೂರು

By

Published : Feb 26, 2020, 12:23 PM IST

ಕೊಪ್ಪಳ: ದೇಶದ್ರೋಹ ಘೋಷಣೆ ಕೂಗುವವರು ಈ ದೇಶದಲ್ಲಿ ಇರಬಾರದು ಎಂದು ಜಿಲ್ಲೆಯ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ್ ದಡೇಸಗೂರು ಹೇಳಿದ್ದಾರೆ‌.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೂ ಇಂತಹ ಕೆಲಸ ಮಾಡಬಾರದು ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಈ ನೆಲದಲ್ಲಿದ್ದುಕೊಂಡು ಇಲ್ಲಿನ ಆಹಾರ, ನೀರು ಸೇವಿಸಿ ಇನ್ನೊಂದು ರಾಷ್ಟ್ರದ ಪರ ಮಾತನಾಡುವವರನ್ನು ದೇಶ ಬಿಟ್ಟು ಕಳಿಸಬೇಕು ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಸವರಾಜ್ ದಡೇಸಗೂರು

ಇನ್ನು ಬಿಜೆಪಿ ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ಸಿ.ಎಂ. ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇದೆಲ್ಲ ಶುದ್ಧ ಸುಳ್ಳು. ಅವರು ಪಕ್ಷದ ಆಡಳಿತ ನೋಡಿ ಸುಳ್ಳು ಹೇಳುತ್ತಾರೆ. ಇಂತಹ ಭಾವನೆ ನಮ್ಮಲ್ಲಿಲ್ಲ. ದೇವರ ಆಶೀರ್ವಾದದಿಂದ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಬಡವರ ಪರವಾಗಿ ಕೆಲಸ ಮಾಡುವುದು ಯಡಿಯೂರಪ್ಪ ಮಾತ್ರ ಎಂದರು.

ABOUT THE AUTHOR

...view details