ಕುಷ್ಟಗಿ (ಕೊಪ್ಪಳ): ವೀರಶೈವ ಲಿಂಗಾಯತ ಸಮಾಜದ ಒಬ್ಬ ವ್ಯಕ್ತಿ ಇತರೆ ಸಮಾಜದ ಹತ್ತು ಓಟು ಹಾಕಿಸಬಲ್ಲ. ಅದೇ ಇತರೆ ಸಮಾಜದ ಹತ್ತು ಜನ ಸೇರಿ ವೀರಶೈವ ಲಿಂಗಾಯತ ವ್ಯಕ್ತಿಗೆ ಓಟು ಹಾಕಿಸಲು ಸಾಧ್ಯವಿಲ್ಲ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಅಭಿಪ್ರಾಯವ್ಯಕ್ತಪಡಿಸಿದರು.
ಹನುಮಂತಪ್ಪ ತೊಗರಿ ಮಾತು ಪುನರುಚ್ಛರಿಸಿದ ಶಾಸಕ ಬಯ್ಯಾಪುರ - ಕುಷ್ಟಗಿ ಸುದ್ದಿ 2020
ಈ ಹಿಂದೆ ಜನತಾದಳ ಅಧ್ಯಕ್ಷರಾಗಿದ್ದ ಹನುಮಂತಪ್ಪ ತೊಗರಿಯವರು ಹೇಳಿದ ಮಾತನ್ನು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಮತ್ತೆ ಪುನರುಚ್ಛರಿಸಿದ್ದಾರೆ. ವೀರಶೈವ ಲಿಂಗಾಯತ ಸಮಾಜದ ಒಬ್ಬ ವ್ಯಕ್ತಿ ಇತರೆ ಸಮಾಜದ ಹತ್ತು ಓಟು ಹಾಕಿಸಬಲ್ಲ. ಅದೇ ಇತರೆ ಸಮಾಜದ ಹತ್ತು ಜನ ಸೇರಿ ವೀರಶೈವ ಲಿಂಗಾಯತ ವ್ಯಕ್ತಿಗೆ ಓಟು ಹಾಕಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಕುಷ್ಟಗಿಯಲ್ಲಿ ಬಸವಭವನದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಕಾರ್ಯಕ್ರಮದಲ್ಲಿ ಲ್ಯಾಪ್ಟಾಪ್ , ಟ್ಯಾಬ್ ವಿತರಣೆ ಬಳಿಕ ಮಾತನಾಡಿದ ಅವರು, ನಾನು 1994ರಲ್ಲಿ ಗ್ರಾ.ಪಂ.ಮಟ್ಟದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕಾದ ಸಂದರ್ಭದಲ್ಲಿ ಚಿಂತಿತನಾಗಿದ್ದೆ. ಆಗ ನನಗೆ 1993ರಲ್ಲಿ ಜನತಾದಳ ಅಧ್ಯಕ್ಷರಾಗಿದ್ದ ಹನುಮಂತಪ್ಪ ತೊಗರಿ ಅವರು ವೀರಶೈವ ಲಿಂಗಾಯತ ಸಮಾಜದ ಒಬ್ಬ ವ್ಯಕ್ತಿ ಇತರೇ ಸಮಾಜದ ಹತ್ತು ಓಟು ಹಾಕಿಸಬಲ್ಲ. ಅದೇ ಇತರೆ ಸಮಾಜದ ಹತ್ತು ಜನ ಸೇರಿ ವೀರಶೈವ ಲಿಂಗಾಯತ ವ್ಯಕ್ತಿಗೆ ಓಟು ಹಾಕಿಸಲು ಸಾಧ್ಯವಿಲ್ಲ ಎಂಬ ಮಾತು ಹೇಳಿ ಧೈರ್ಯ ತುಂಬಿದ್ದರು ಎಂದರು.
ಈ ಮಾತಿನ ಉದ್ದೇಶ ಬೇರೆಯವರ ಬಗ್ಗೆ ಅವಹೇಳನಕಾರಿಯಾಗಿಸುವುದಲ್ಲ. ಆಡಿದ ಮಾತು ಸರಿ ಅಲ್ಲವಾಗಿದ್ದರೆ ಇದಕ್ಕೆ ಕ್ಷಮೆ ಯಾಚಿಸುವೆ ಎಂದರು.