ಕುಷ್ಟಗಿ (ಕೊಪ್ಪಳ):ನಗರ ಪ್ರದೇಶಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗಿ ಪರಿಶುದ್ಧ ಗಾಳಿಗಾಗಿ ಹಾತೊರೆಯುವಂತಾಗಿದೆ. ಈ ಪರಿಸ್ಥಿತಿ ನಮ್ಮಲ್ಲಿ ಬರುವುದು ಬೇಡ ಎನ್ನುವುದಾದರೆ ಹೆಚ್ಚು- ಹೆಚ್ಚು ಮರಗಳನ್ನು ಬೆಳಸಬೇಕಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ವಿಶ್ವ ಪರಿಸರ ದಿನ ಪ್ರಯುಕ್ತ ತಾಲೂಕಿನ ನಿಡಶೇಷೆ ಕೆರೆಯಲ್ಲಿ ಸಸಿ ನೆಟ್ಟು ಮಾತನಾಡಿದ ಅವರು, ಮುಂಬೈ, ದೆಹಲಿಯಂತಹ ನಗರಗಳಲ್ಲಿ ಶುದ್ಧ ಗಾಳಿಯ ಅಭಾವವಿದೆ. ಮುಂಬೈ ನಗರದಲ್ಲಿ ಕೋವಿಡ್-19 ಸೋಂಕಿತರು ಸಂಖ್ಯೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಿಂದ ವಾಪಸ್ ಆದ ಕೂಲಿ ಕಾರ್ಮಿಕರಿಂದ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಏರಿಕೆ ಆಗುತ್ತಿದೆ ಎಂದರು.