ಕುಷ್ಟಗಿ(ಕೊಪ್ಪಳ):ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ಕುಮಾರ್ ಅವರು ಪಿಯು ದ್ವಿತೀಯ ಪರೀಕ್ಷೆ ರದ್ಧತಿ ಮಾಡಿದ್ದು, ಆತ್ಮವಂಚನೆ ನಿರ್ಧಾರವಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಬೇಸರ ವ್ಯಕ್ತಪಡಿಸಿದರು.
ಪಿಯುಸಿ ಪರೀಕ್ಷೆ ರದ್ಧತಿ ಬೆನ್ನಲ್ಲೇ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಎಸ್ಎಸ್ಎಲ್ಸಿ ಹಾಗೂ ಪಿಯು ಪರೀಕ್ಷೆಯ ಬಗ್ಗೆ ಪ್ರಸ್ತಾಪಿಸಿದ್ದು, ಕೊರೊನಾ ಹಾವಳಿ ತಗ್ಗಿದ ಮೇಲೆ ಪಿಯುಸಿ ದ್ವಿತೀಯ ಪರೀಕ್ಷೆ ನಡೆಸುವ ಸಾಧ್ಯತೆಗಳಿದ್ದವು.
ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ತೀರ್ಮಾನಿಸುವ ವಿಷಯ ಸ್ವಾಗತಾರ್ಹವಾಗಿದೆ. ಆದರೆ, ಪಿಯುಸಿ ಪರೀಕ್ಷೆ ನಡೆಸುವ ವಿಶ್ವಾಸವೂ ಇತ್ತು. ಆದರೆ, ಕೇಂದ್ರ ಸರ್ಕಾರ ಸಿಬಿಎಸ್ಸಿ ದ್ವಿತೀಯ ಪರೀಕ್ಷೆ ರದ್ದುಗೊಳಿಸಿದೆ.
ರಾಜ್ಯದಲ್ಲಿ ಪಿಯು ಪರೀಕ್ಷೆ ನಡೆಸಿದರೆ ಪ್ರಧಾನಿಗಳ ನಿರ್ಧಾರ ವಿರುದ್ಧ ಹಾಕಿ ಕೊಳ್ಳಬೇಕಾಗುತ್ತದೆ ಎಂದು ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿದೆ ಎಂದರು.
ಪಿಯು ಪರೀಕ್ಷೆ ರದ್ದು ಪಡಿಸಿ, ಎಸ್ಎಸ್ಎಲ್ಸಿ ಮಾತ್ರ ನಡೆಸುವ ನಿರ್ಧಾರ ಪಿಯು ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಪಿಯು ವ್ಯಾಸಾಂಗದಲ್ಲಿರುವ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಅಡ್ಡಿಯಾಗಲಿದೆ ಎಂದು ತಿಳಿಸಿದರು.