ಕರ್ನಾಟಕ

karnataka

ETV Bharat / state

ಸ್ವತಃ ಏಣಿ ಏರಿ ಕಾಲೇಜು ಛಾವಣಿ ಪರಿಶೀಲಿಸಿದ ಶಾಸಕ ಅಮರೇಗೌಡ ಪಾಟೀಲ್

ಸರ್ಕಾರಿ ಕಾಲೇಜು ಕಟ್ಟಡ ಪರಿಶೀಲನೆಗೆ ಆಗಮಿಸಿದ್ದ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ​ ತಾವೇ ಕಟ್ಟಡದ ಮೇಲೇರಿ ಸ್ಥಿತಿಗತಿ ಅವಲೋಕಿಸಿದ್ದಾರೆ. ಏಣಿ ಮೂಲಕ ಮೇಲೆ ಹತ್ತಿದ ಅವರು ಮಾಳಿಗೆಯನ್ನ ಪರಿಶೀಲಿಸಿದ್ದಾರೆ.

mla-amaregouda-patil-who-checked-himself-climbing-up-college-roof
ಸ್ವತಃ ಏಣಿ ಏರಿ ಕಾಲೇಜು ಚಾವಣಿ ಪರಿಶೀಲಿಸಿದ ಶಾಸಕ ಅಮರೇಗೌಡ ಪಾಟೀಲ್

By

Published : Jul 20, 2021, 7:27 AM IST

ಕೊಪ್ಪಳ: ಜಿಲ್ಲೆಯ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ್​ ಅವರು ಸ್ವತಃ ಏಣಿ ಏರಿ ಸರ್ಕಾರ ಕಾಲೇಜು ಕಟ್ಟಡದ ಛಾವಣಿ ಪರಿಶೀಲಿಸಿದ್ದಾರೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಶಿಥಿಲಗೊಂಡಿರುವ ಹಾಗೂ ಹಳೆಯ ಕಟ್ಟಡಗಳು ಸೋರುತ್ತಿವೆ.

ಸ್ವತಃ ಏಣಿ ಏರಿ ಕಾಲೇಜು ಛಾವಣಿ ಪರಿಶೀಲಿಸಿದ ಶಾಸಕ ಅಮರೇಗೌಡ ಪಾಟೀಲ್

ಅದರಂತೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡ ಹಳೆಯದ್ದಾಗಿದೆ. ಸುಮಾರು 50 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಈ ಕಟ್ಟಡದ ಸ್ಥಿತಿಗತಿ ಅರಿಯಲು ಶಾಸಕರು ಆಗಮಿಸಿದ್ದರು.

ಈ ವೇಳೆ ಸ್ವತಃ ಏಣಿಯ ಬಳಿಸಿ ಕಟ್ಟಡದ ಛಾವಣಿ ಪರಿಶೀಲಿಸಿದ್ದಾರೆ. ಜೊತೆಗೆ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ನೂತನ ಕಟ್ಟಡ ನಿರ್ಮಾಣಕ್ಕೆ ಸೂಚಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಬಕ್ರೀದ್ ಹಬ್ಬಕ್ಕೆ ಗೋವುಗಳ ಬಲಿ ಬೇಡ: ಸಚಿವ ಪ್ರಭು ಚವ್ಹಾಣ್

ABOUT THE AUTHOR

...view details