ಕರ್ನಾಟಕ

karnataka

ETV Bharat / state

ಅಧಿಕಾರಿಗಳು ಆಕ್ಷೇಪಣೆಗಳಿಗೆ ಹೆದರದೇ ಕೆಲಸ ಆರಂಭಿಸಿ: ಶಾಸಕ ಬಯ್ಯಾಪೂರ - ತ್ರೈಮಾಸಿಕ ಕೆಡಿಪಿ ಸಭೆ

ಅಧಿಕಾರಿಗಳು, ಜನಪ್ರತಿನಿಧಿಗಳು ಒಂದೇ ಚಕ್ಕಡಿಯ ಎರಡು ಗಾಲಿ ಇದ್ದಂತೆ. ಒಂದು ಗಾಲಿ ಮುರಿದು ಬಿದ್ದರೆ ಮುನ್ನಡೆಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳಿಗೆ ಸಾಕಷ್ಟು ಆಕ್ಷೇಪಣೆಗಳಿದ್ದರೂ ಅವರು ಸರ್ಕಾರ ಮುನ್ನಡೆಸುತ್ತಿಲ್ಲವೇ? ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.

Mla Amaregouda Patil Bayyapura meeting
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ

By

Published : Mar 13, 2021, 10:42 AM IST

ಕುಷ್ಟಗಿ (ಕೊಪ್ಪಳ): ನಡೆದಾಡಿದರೆ ಎಡವಲು ಸಾಧ್ಯ, ನಡೆಯದೇ ಇದ್ದರೆ ಹೇಗೆ ಎಡವಲು ಅಸಾಧ್ಯ. ಅಧಿಕಾರಿಗಳು ಆಕ್ಷೇಪಣೆಗಳಿಗೆ ಹೆದರದೇ ಕೆಲಸ ಆರಂಭಿಸಿ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ತಾಕೀತು ಮಾಡಿದರು.

ತ್ರೈಮಾಸಿಕ ಕೆಡಿಪಿ ಸಭೆ

ಕುಷ್ಟಗಿಯ ಸರ್ಕ್ಯೂಟ್ ಹೌಸ್​ನಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಸಮಸ್ಯೆ ಇದ್ದದ್ದೇ. ಅವುಗಳನ್ನು ಪರಿಹರಿಸಿ ಮುನ್ನಡೆಯಬೇಕಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಒಂದೇ ಚಕ್ಕಡಿಯ ಎರಡು ಗಾಲಿ ಇದ್ದಂತೆ. ಒಂದು ಗಾಲಿ ಮುರಿದು ಬಿದ್ದರೆ ಮುನ್ನಡೆಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳಿಗೆ ಸಾಕಷ್ಟು ಆಕ್ಷೇಪಣೆಗಳಿದ್ದರೂ ಅವರು ಸರ್ಕಾರ ಮುನ್ನಡೆಸುತ್ತಿಲ್ಲವೇ? ನನ್ನ ಮೇಲೆಯೂ ಸಾಕಷ್ಟು ಆಕ್ಷೇಪಣೆಗಳಿವೆ. ಅವುಗಳನ್ನು ನಿವಾರಿಸಿ ಮುನ್ನಡೆಯುತ್ತಿದ್ದೇನೆ ಎಂದರು.

ಓದಿ:ಕೋವಿಡ್ ನಿಯಮ​ ಉಲ್ಲಂಘನೆ ಪ್ರಕರಣಗಳನ್ನು ಹಿಂಪಡೆಯಲು ಉತ್ತರಾಖಂಡ ಸರ್ಕಾರ ನಿರ್ಧಾರ

ಇದೇ ವೇಳೆ ಕುಷ್ಟಗಿ ತಾಲೂಕಿನ ಶುದ್ದ ನೀರಿನ ಘಟಕಗಳನ್ನು ಗ್ರಾಮ ಪಂಚಾಯಿತಿಯವರು ಹಸ್ತಾಂತರಿಸಿಕೊಂಡು ನಿರ್ವಹಿಸಲು ಸಲಹೆ ನೀಡಿದರು. ಜಿ.ಪಂ. ಸದಸ್ಯ ಕೆ. ಮಹೇಶ ಮಾತನಾಡಿ, ಶುದ್ದ ನೀರಿನ ಘಟಕಗಳ ಸುಸ್ಥಿತಿ ವಿಚಾರದಲ್ಲಿ ವರ್ಷಪೂರ್ತಿ ಸಭೆ ನಡೆಸಿ, ಜಿ.ಪಂ. ಅವಧಿ ಮುಗಿಯುತ್ತಾ ಬಂದರೂ ಸಮಸ್ಯೆಗೆ ಪರಿಹಾರ ಕಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details