ಕುಷ್ಟಗಿ:ಚೀನಾದಲ್ಲಿ ರೋಗಿಗೆ ಕೊರೊನಾ ಪಾಸಿಟಿವ್ ಬಂದು ನಂತರ ನೆಗೆಟಿವ್ ಬಂದರೂ, ಪುನಃ ಪಾಸಿಟಿವ್ ಕಂಡು ಬಂದಿರುವ ಸಾಕಷ್ಟು ಉದಾಹರಣೆಗಳಿವೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್ಗಳಾಗಿರುವ ಆಶಾ ಕಾರ್ಯಕರ್ತೆಯರಿಗೆ ಆಯುಷ್ ಇಲಾಖೆಯ ವತಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಚವನ್ ಪ್ರಾಶ್ ವಿತರಿಸಿ ಮಾತನಾಡಿದರು.
ಆಯುರ್ವೇದ ಹಾಗೂ ಹೋಮಿಯೋಪತಿ ಔಷಧಗಳಿಂದ ಮಾತ್ರ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಾಧ್ಯವಿದೆ. ಅಲೋಪತಿ ಔಷಧಿಗಳಿಂದ ಸದ್ಯಕ್ಕೆ ಕಾಯಿಲೆ ಗುಣವಾಗಬಹುದು. ಆದರೆ ಪುನಃ ಮರಳಿ ಬರುವ ಸಾಧ್ಯತೆಯಿದೆ. ಆದರೆ, ಆಯುರ್ವೇದ ಹಾಗಲ್ಲ, ಒಮ್ಮೆ ಗುಣವಾದರೆ ಪುನಃ ರೋಗ ಮರಳಿ ಬರಲ್ಲ ಎಂದರು.
ಆಶಾ ಕಾರ್ಯಕರ್ತೆಯರಿಗೆ ಚವನ್ ಪ್ರಾಶ್ ವಿತರಿಸಿದ ಶಾಸಕ ಅಮರೇಗೌಡ ಪಾಟೀಲ ತಾಲೂಕಿನ ವೈದ್ಯಾಧಿಕಾರಿ ಡಾ. ಆನಂದ ಗೋಟೂರು, ಆಯುಷ್ ಜಿಲ್ಲಾ ವೈದ್ಯಾಧಿಕಾರಿ ಡಾ. ಬಸವರಾಜ್, ಕುಂಬಾರ, ಡಾ. ಚಂದ್ರಕಾಂತ ಮಂತ್ರಿ ಮತ್ತಿತ್ತರಿದ್ದರು. ಇದೇ ವೇಳೆ ತಾಲೂಕಿನ 250 ಆಶಾ ಕಾರ್ಯಕರ್ತೆಯರಿಗೆ ರೋಗ ನಿರೋಧಕತೆ ಹೆಚ್ಚಿಸುವ ಚವನ್ ಪ್ರಾಷ್ ನೀಡಿದರು.