ಕರ್ನಾಟಕ

karnataka

ETV Bharat / state

ಅಧಿವೇಶನ ಸಂದರ್ಭದಲ್ಲಿಯೇ ಎಂಇಎಸ್ ಗಮನ ಸೆಳೆಯಲು ಈ ಆಟ ಆಡುತ್ತಿದೆ : ಶಾಸಕ ಬಯ್ಯಾಪೂರ - ಎಂಇಎಸ್ ಸಂಘಟನೆ

ಬೆಳಗಾವಿಯಲ್ಲಿ ದೇಶಭಕ್ತ ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿರುವುದು ನೀಚತನದ ಪರಮಾವಧಿಯಾಗಿದೆ. ಸದರಿ ಕಿಡಗೇಡಿಗಳನ್ನು ಪೊಲೀಸರು ಬಂಧಿಸಿರುವ ಬಗ್ಗೆ ಮಾಧ್ಯಮದಿಂದ ತಿಳಿದುಕೊಂಡಿದ್ದೇನೆ. ಇನ್ಮುಂದೆ ಇಂತಹ ಪ್ರಕರಣಗಳು ಪುನರಾವರ್ತನೆಯಾಗದಂತೆ ಸರ್ಕಾರ ನಿಗಾವಹಿಸಬೇಕಿದೆ..

MLA Amaregauda Patil Biayapura outrage against MES
ಶಾಸಕ ಬಯ್ಯಾಪೂರ

By

Published : Dec 19, 2021, 7:17 PM IST

ಕುಷ್ಟಗಿ: ನಮ್ಮ ರಾಜ್ಯದ 224 ಶಾಸಕರು ಭಾಗವಹಿಸುವ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿಯೇ ಎಂಇಎಸ್ ಗಮನ ಸೆಳೆಯಲು ಈ ಆಟ ಆಡುತ್ತಿದೆ. ಅವರ ಆಟ ಎಂದಿಗೂ ನಡೆಯದು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಎಂಇಎಸ್ ಸಂಘಟನೆಯ ರಣಹೇಡಿ ಕಿಡಿಗೇಡಿತನ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ತಾಲೂಕು ಕ್ರೀಡಾಂಗಣದ ಆವರಣದಲ್ಲಿ ನೂತನ ಒಳಾಂಗಣ ಕ್ರೀಡಾಂಗಣದ ಲೋಕಾರ್ಪಣೆಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಸಮಯದಲ್ಲಿ ತೆಪ್ಪಗೆ ಇದ್ದು, ಅಧಿವೇಶನದ ಸಂಧರ್ಭದಲ್ಲಿ ಪದೇಪದೆ ಕಿಡಕೇಡಿತನ ಪ್ರದರ್ಶಿಸುತ್ತಿದೆ.

ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಈ ಪ್ರಕರಣದ ಬಗ್ಗೆ ಆ ಪಕ್ಷವನ್ನು ಆಪಾದಿಸುವುದು ಸರಿ ಅಲ್ಲ. ಈ ಹಿಂದೆ ಎಲ್ಲಾ ಸರ್ಕಾರದ ಅವಧಿಯಲ್ಲೂ ಮಹಾರಾಷ್ಟ್ರದ ಏಕೀಕರಣ ಸಮಿತಿ ಪುಂಡಾಟಿಕೆ ಮೆರೆದ ಇತಿಹಾಸವಿದೆ. ಬೆಳಗಾವಿ ತಮ್ಮದಾಗಿಸಲು ಪದೇಪದೆ ಮಹಾಮೇಳಾವ್ ಮೂಲಕ ಕಿಡಕೇಡಿತನ ಕೃತ್ಯಕ್ಕೆ ಇಳಿದಿದೆ ಎಂದರು.

ಎಂಇಎಸ್‌ ವಿರುದ್ಧ ಶಾಸಕ ಬಯ್ಯಾಪೂರ ಆಕ್ರೋಶ ವ್ಯಕ್ತಪಡಿಸಿರುವುದು..

ಈ ಸಂಘಟನೆಯ ಹಿಂದೆ ಅನೇಕ ಕಾಣದ ಕೈಗಳಿವೆ. ಎಂಇಎಸ್ ಏನೇ ಆಟವಾಡಲಿ ಅದೇನು ನಡೆಯದು. ನಮ್ಮ ಪೊಲೀಸ್​​ ಇಲಾಖೆ ಪ್ರಖರವಾಗಿದೆ. ನಿಷ್ಠೆಯಿಂದ ಎಂಇಎಸ್ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಪುಂಡಾಟಿಕೆ ಮೆರೆಯುವ ಎಂಇಎಸ್ ಸಂಘಟನೆಯವರಿಗೆ ಉಗ್ರ ಶಿಕ್ಷೆ ವಿಧಿಸಲು ಸರ್ಕಾರವನ್ನು ಒತ್ತಾಯಿಸುತ್ತೇನೆ.

ಬೆಳಗಾವಿಯಲ್ಲಿ ದೇಶಭಕ್ತ ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿರುವುದು ನೀಚತನದ ಪರಮಾವಧಿಯಾಗಿದೆ. ಸದರಿ ಕಿಡಗೇಡಿಗಳನ್ನು ಪೊಲೀಸರು ಬಂಧಿಸಿರುವ ಬಗ್ಗೆ ಮಾಧ್ಯಮದಿಂದ ತಿಳಿದುಕೊಂಡಿದ್ದೇನೆ. ಇನ್ಮುಂದೆ ಇಂತಹ ಪ್ರಕರಣಗಳು ಪುನರಾವರ್ತನೆಯಾಗದಂತೆ ಸರ್ಕಾರ ನಿಗಾವಹಿಸಬೇಕಿದೆ ಎಂದರು.

ಉಚಿತ ತರಬೇತಿ ಕೇಂದ್ರ ಆರಂಭಿಸುವ ಮನಸ್ಸಿದೆ :ತಾಲೂಕಿನ ಯುವಕರನ್ನು ಪೊಲೀಸ್ ಹಾಗೂ ಸೇನೆಯ ಭರ್ತಿಗಾಗಿ ಉಚಿತ ತರಬೇತಿ ಕೇಂದ್ರ ಆರಂಭಿಸುವ ಮನಸ್ಸಿದೆ ಎಂದು ಹೇಳಿದರು. ಕ್ರೀಡಾಂಗಣದಲ್ಲಿರುವ ಹಳೆ ಕಟ್ಟಡ ದುರಸ್ಥಿಗೊಳಿಸಿ, ಕೋಚಿಂಗ್ ನೀಡುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳ ಸಹಯೋಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವ ತಯಾರಿಗೆ ಕೋಚಿಂಗ್ ನಡೆಸಲಾಗುತ್ತಿದೆ.

ಅದು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆಯೋ ಗೊತ್ತಿಲ್ಲ. ಅದೇ ರೀತಿ ಪೊಲೀಸ್, ಸಬ್ ಇನ್​ಸ್ಪೆಕ್ಟರ್​ ಹುದ್ದೆಗೆ ತರಬೇತಿಗೊಳಿಸುವ ಉದ್ದೇಶ ಹೊಂದಲಾಗಿದೆ. ಈ ಹಿನ್ನೆಲೆ ಸೇನೆಯಿಂದ ನಿವೃತ್ತರಾದ ಅಧಿಕಾರಿಗಳ ಸಂಪರ್ಕದಲ್ಲಿದ್ದು, ಕೆಲವೇ ದಿನಗಳಲ್ಲಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ABOUT THE AUTHOR

...view details